ಬಿಹಾರ, ಮೇ 7: ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ನಡುವೆಯೇ ಬಿಹಾರದ ಮುಝಫ್ಫರ್ ಪುರದ ಹೊಟೇಲೊಂದರಲ್ಲಿ 2 ಇವಿಎಂ ಮತ್ತು 2 ವಿವಿ ಪ್ಯಾಟ್ ಗಳು ಪತ್ತೆಯಾಗಿವೆ.
ಈ ಸಂಬಂಧ ಸೆಕ್ಟರ್ ಮ್ಯಾಜಿಸ್ಟ್ರೇಟ್ ಅವ್ದೇಶ್ ಕುಮಾರ್ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ರಂಜನ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಹೊಟೇಲ್ ನಲ್ಲಿ ಪತ್ತೆಯಾದ ಯಂತ್ರಗಳು ರಿಸರ್ವ್ ಇವಿಎಂಗಳಾಗಿದ್ದು, ಒಂದು ವೇಳೆ ಬೇರೆ ಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡರೆ ಬಳಸಲಾಗುತ್ತಿತ್ತು. ಅವರು ಹೊಟೇಲ್ ನಲ್ಲಿ ಯಂತ್ರಗಳನ್ನು ಕೆಳಗಿಳಿಸಬಾರದಿತ್ತು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಘೋಶ್ ಹೇಳಿದ್ದಾರೆ.
ಅಧಿಕಾರಿ ಅವ್ದೇಶ್ ಕುಮಾರ್ ಇವಿಎಂಗಳನ್ನು ಮತ್ತು ವಿವಿ ಪ್ಯಾಟ್ ಗಳನ್ನು ಇರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಲೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಎಸ್ ಡಿಒ ಕುಂದನ್ ಕುಮಾರ್ ಹೋಟೆಲ್ ಗೆ ಆಗಮಿಸಿ ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ಸುದ್ದಿಗಳು
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ
ಭಾರತೀಯ ಮಣ್ಣಲ್ಲಿ ಹಳ್ಳಿ ನಿರ್ಮಿಸಿದ ಚೀನಾ- ಪ್ರಧಾನಿ ಮೌನವೇಕೆ?
ಟ್ರಂಪ್ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ
ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್- ಪಶು ಸಂಗೋಪನೆ ಸಚಿವ
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸುರತ್ಕಲ್: ಸೋಶಿಯಲ್ ಮೀಡಿಯಾ ಮೂಲಕ ಹನಿಟ್ರ್ಯಾಪ್- ನಾಲ್ವರ ಬಂಧನ