janadhvani

Kannada Online News Paper

ಪದವಿ ಪೂರ್ವ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್‌ ಹಾಜರಾತಿ ಕಡ್ಡಾಯ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಕ್ಷಣವೇ ಬಯೋ ಮೆಟ್ರಿಕ್‌ ಹಾಜರಾತಿ ಪಡೆಯದೇ ಇದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಆಧಾರ್‌ ಆಧಾರಿತ ಆನ್‌ಲೈನ್‌ ಬಯೋಮೆಟ್ರಿಕ್‌ನಲ್ಲಿ ಹಾಜರಾತಿ ತೆಗೆದುಕೊಂಡ ಬಗ್ಗೆ ಇದೇ 4 ರೊಳಗೆ ಕಾಲೇಜುಗಳ ಮುಖ್ಯಸ್ಥರು ಇಲಾಖೆಗೆ ವರದಿ ಮಾಡಬೇಕು ಎಂದು ಇಲಾಖಾ ಜಂಟಿ ನಿರ್ದೇಶಕರು ಆದೇಶಿಸಿದ್ದಾರೆ.

ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್‌ ಅಳವಡಿಕೆ 2013 ರಲ್ಲೇ ಕಡ್ಡಾಯಗೊಳಿಸಲಾಗಿತ್ತಾದರೂ ಅನುಷ್ಠಾನ ಆಗಿರಲಿಲ್ಲ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜುಗಳಿಗೆ ಹಾಜರಾಗುತ್ತಿಲ್ಲ. ಇವರು ಟ್ಯೂಷನ್‌, ರಿಯಲ್ ಎಸ್ಟೇಟ್‌ ಮತ್ತಿತರ ಕೆಲಸ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಇದಕ್ಕೆ ಕಡಿವಾಣ ಹಾಕಿದರೆ ಶಿಸ್ತು ತರಲು ಸಾಧ್ಯ ಎಂಬುದು ಅಧಿಕಾರಿಗಳ ಸಮಜಾಯಿಷಿ.

error: Content is protected !! Not allowed copy content from janadhvani.com