janadhvani

Kannada Online News Paper

ದ.ಕ ಜಿಲ್ಲಾ ಎಸ್ಸೆಸ್ಸೆಫ್ ‘ಬ್ಲಡ್ ಸೈಬೋ’- ಕಿನ್ಯಾ ರಕ್ತದಾನ ಶಿಬಿರ ಯಶಸ್ವಿ

ಉಳ್ಲಾಲ: SSF ಕಿನ್ಯ ಸೆಕ್ಟರ್, SYS ಕಿನ್ಯ ಇವುಗಳ ಜಂಟೀ ಆಶ್ರಯದಲ್ಲಿ SSF ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ 82ನೇ ರಕ್ತದಾನ ಶಿಬಿರವು ಯೇನೆಪೋಯ ಮೆಡಿಕಲ್ ಆಸ್ಬತ್ರೆಯ ಸಹಭಾಗಿತ್ವದಲ್ಲಿ ದಿನಾಂಕ:28-4-2019ರಂದು ದ.ಕ ಜಿಲ್ಲಾ ಪಂಚಾಯತ್ ಫ್ರಾಥಮಿಕ ಶಾಲೆ ಬೆಳರಿಂಗೆ ಕಿನ್ಯದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿ ತಂಙಳ್ ದುಆ ನಡೆಸಿದರು. KCF ಜಿದ್ದಾ ಝೋನ್ ಕಾರ್ಯದರ್ಶಿ ಇಭ್ರಾಹಿಂ ಖಲೀಲ್ ಇಂಜಿನೀಯರ್ ಕಿನ್ಯ ಉಧ್ಘಾಟನೆ ನೆರವೇರಿಸಿದರು. ಮೆಹಬೂಬ್ ಸಖಾಫಿ ಕಿನ್ಯ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ವಿವರಣೆ ನೀಡಿದರು.

ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ ಸದಸ್ಯರಾದ ಹಮೀದ್ ಕಿನ್ಯ, ಫಾರೂಕ್ ಕಿನ್ಯ, ಮೊಹಮ್ಮದ್, ಅಬೂಸಾಲಿ ಕೆ.ಬಿ, ಉಳ್ಳಾಲ ಡಿವಿಜನ್ ಕಾರ್ಯಧರ್ಶಿ ಹಮೀದ್ ತಲಪಾಡಿ, ಡಿವಿಜನ್ ಬ್ಲಡ್ ಉಸ್ತುವಾರಿ ಹಕೀಂ ಪೂಮಣ್, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಭಾವು ಉಕ್ಕುಡ, ಮೂಸ ಕಿನ್ಯ,ಅಬ್ದುಸ್ಸಲಾಂ ಸಹದಿ,ಅಬ್ದುರ್ರಹ್ಮಾನ್ ಸಅದಿ, ಕರ್ನಾಟಕ ಬ್ಲಡ್ ಹೆಲ್ಪ್ ಲೈನ್ ಸದಸ್ಯ ಇಸ್ಮಾಯಿಲ್ ಶಾಫಿ ಕಿನ್ಯ,ಕಿನ್ಯ ಸೆಕ್ಟರ್ ಉಪಾಧ್ಯಕ್ಷ ಜಹ್ಫರ್ ಖುತುಬಿನಗರ ಹಾಗೂ ಕಿನ್ಯ ಸೆಕ್ಟರ್ ನಾಯಕರು ಅಲ್ಲದೆ ಕಿನ್ಯ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಫಯಾಝ್ ಕಿನ್ಯ ಅತಿಥಿಗಳನ್ನು ಹಾಗೂ ರಕ್ತದಾನಿಗಳನ್ನು ಸ್ವಾಗತಿಸಿದರು.

ವರದಿ:ಫಯಾಝ್ ಕಿನ್ಯ

error: Content is protected !! Not allowed copy content from janadhvani.com