janadhvani

Kannada Online News Paper

‘ಸಿನಿಮಾಕ್ಕೆ7-8 ಕೋಟಿ ತೆಗೊಂಡು ಆರಾಮಾಗಿದ್ದೀಯಾ’ ಸಾಲಮನ್ನಾ ಬೇಡ ಎಂದ ದರ್ಶನ್ ಗೆ ಕೊನೇ ಎಚ್ಚರಿಕೆ

ಮಂಡ್ಯ (ಏ.28): ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿ ನಟ ದರ್ಶನ್ ನೀಡಿದ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಕೆಲವರು ದರ್ಶನ್ ಹೇಳಿಕೆ ಬೆಂಬಲಿಸಿದರೆ, ಇನ್ನೂ ಕೆಲವರು ಖಂಡಿಸಿದ್ದಾರೆ. ದರ್ಶನ್ ಮಾತಿಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅಭಿಮಾನಿಯೋರ್ವ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೋ ಮಾಡಿ ಹಾಕಿದ್ದಾರೆ.

ದರ್ಶನ್ ಹೇಳಿಕೆ ವಿರೋಧಿಸಿ ಎಚ್ಡಿಕೆ ಅಭಿಮಾನಿಯೋರ್ವ ಮಾತನಾಡಿದ್ದು, ಈ ವಿಡಿಯೋವನ್ನು ‘ಕುಮಾರಸ್ವಾಮಿ ಫಾರ್ ಸಿಎಂ’ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ರೈತರು ಸಾಲ ಮಾಡಿಕೊಂಡು ಊರೂರು ಸುತ್ತುತ್ತಿದ್ದಾರೆ. ಅನೇಕ ರೈತರು ಸೋಪ್ ಕೊಂಡುಕೊಳ್ಳಲು ಹಣ ಇಲ್ಲದೆ ಒದ್ದಾಡುತ್ತಿದ್ದಾರೆ. ನಿನಗೇನೂ ಒಂದು ಸಿನಿಮಾಕ್ಕೆ7-8 ಕೋಟಿ ರೂಪಾಯಿ ತೆಗೆದುಕೊಂಡು ಆರಾಮಾಗಿದ್ದೀಯಾ. ಒಳ್ಳೊಳ್ಳೆ ಕಾರ್ ತೆಗೆದುಕೊಂಡು ಮೆರವಣಿಗೆ ಮಾಡ್ಕೊಂಡು ತಿರುಗಾಡುತ್ತೀಯಾ. ಹೀಗಿರುವಾಗ ರೈತರ ಸಾಲಮನ್ನಾ ಬೇಡ ಎಂದು ಹೇಳಲು ನೀನ್ಯಾರು,” ಎಂದು ಏಕವಚನದಲ್ಲಿ ದರ್ಶನ್ರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.

ರೈತರು ಕಟ್ಟಿದ ತೆರಿಗೆ ಹಣದಿಂದ ಸಾಲಮನ್ನಾ ಮಾಡುತ್ತಿದ್ದಾರೆ. ನಿಮ್ಮ ಕೈಲಿ ತಾಕತ್ತಿದ್ದರೆ ನೀವೇ ಸಾಲಮನ್ನಾ ಮಾಡಿ. ಕುಮಾರಸ್ವಾಮಿ ಮಾಡ್ತಿರೋ ಸಾಲಮನ್ನಾವನ್ನು ಏಕೆ ವಿರೋಧಿಸುತ್ತೀಯಾ? ರೈತರ ಮೇಲೆ ನಿಜವಾಗಲೂ ಕಾಳಜಿ ಇದ್ದರೆ ಮೋದಿ ಮುಂದೆ ಹೋಗಿ ಕುಳಿತುಕೊಂಡು ರಾಜ್ಯಕ್ಕೆ ಬೇಕಾಗಿರೋ ಅನುದಾನ ತೆಗೆದುಕೊಂಡು ಬನ್ನಿ. ಸಿನಿಮಾ ನಟ ಸಿನಿಮಾ ನಟನಾಗಿ ಗೌರವ ಉಳಿಸಿಕೋ. ರೈತರ ಸಾಲಮನ್ನಾ ವಿಚಾರದ ಬಗ್ಗೆ ಮಾತನಾಡಬೇಡ. ಇದು ನಿನಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆ,” ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

ವಿವಿ ಪುರಂನ ಬಿಐಟಿ ಕಾಲೇಜಿನಲ್ಲಿ ಮಾತನಾಡಿದ್ದ ದರ್ಶನ್, ‘ಕೃಷಿಕರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ, ರೈತರೇ ಸಾಲ ತೀರಿಸುತ್ತಾರೆ. ರೈತರು ಬೆಳೆದ ಬೆಳೆಗೆ ಒಳ್ಳೆ ಬೆಲೆ ಸಿಗುವಂತಾಗಲಿ. ಹಾಗೆ ಮಾಡಿದರೆ ಸಾಲಮನ್ನಾ ಪರಿಸ್ಥಿತಿ ಉದ್ಭವಿಸುವುದಿಲ್ಲ. ರೈತರೇ ಸರ್ಕಾರಕ್ಕೆ ಸಾಲ ಕೊಡ್ತಾರೆ. ಜೈ ಜವಾನ್.. ಜೈ ಕಿಸಾನ್’ ಎಂದಿದ್ದರು. ಸಾಲಮನ್ನಾ ಕುರಿತು ಸಿಎಂ ಕುಮಾರಸ್ವಾಮಿ ಪದೇ ಪದೇ ತಮ್ಮ ಚುನಾವಣಾ ಪ್ರಚಾರದಲ್ಲಿ ಉಲ್ಲೇಖಿಸಿದ್ದರು. ನಮ್ಮ ಸರ್ಕಾರದಿಂದ ಸಾಲಮನ್ನಾವಾಗಿದೆ. ಅವರು ಏನು ಮಾಡಿದ್ದಾರೆ ಎಂದು ಕೂಡ ಮಂಡ್ಯದಲ್ಲಿ ಸಿಎಂ ಹೇಳಿದ್ದರು. ಈ ಕುರಿತು ಈಗ ಪರೋಕ್ಷವಾಗಿ ದರ್ಶನ್ ಪರೋಕ್ಷವಾಗಿ ಟಾಂಗ್ ನೀಡಿದ್ದರು.

error: Content is protected !! Not allowed copy content from janadhvani.com