ಕೋಝಿಕ್ಕೋಡ್: ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡುವ ಆದೇಶಗಳು ಧಾರ್ಮಿಕ ವಿಶ್ವಾಸ ವಿಧಿಗಳನ್ನು ಪರಿಗಣಿಸಿ ಇರಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ, ಸಮಸ್ತ ಕೇರಳ ಜಂಇಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ ಆದ ಕಾಂತಪುರಂ ಎ. ಪಿ.ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ.
ಮಸೀದಿಯಲ್ಲಿ ಸ್ತ್ರೀ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ
ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥಿಸಲು ಅವರ ಮನೆಯೇ ಉತ್ತಮ ಎನ್ನುವುದು ಧಾರ್ಮಿಕ ಸಂಹಿತೆಗಳಲ್ಲಿ ವ್ಯಕ್ತಪಡಿಸಲಾದ ವಿಚಾರವಾಗಿದೆ.
ಮಕ್ಕಾಗೆ ಹಜ್ ಮತ್ತು ಉಮ್ರಾ ನಿರ್ವಹಿಸಲು ಹೋಗಲಾಗುತ್ತಿದ್ದು, ಆ ಹಿನ್ನಲೆಯಲ್ಲಿನ ಮಸೀದಿ ಪ್ರವೇಶವನ್ನು ಇನ್ನಿತರ ಸಂದರ್ಭಗಳಿಗೆ ತುಲನೆ ಮಾಡ ಬೇಕಾಗಿಲ್ಲ. ಮಹಿಳೆಯರಿಗೆ ನಮಾಝ್ ನಿರ್ವಹಿಸಲು ಅವರ ಮನೆಯೇ ಅತ್ಯತ್ತಮವಾಗಿದೆ. ಆ ಕಾರಣಕ್ಕಾಗಿ ಮಸೀದಿಯಲ್ಲಿ ಮಾತ್ರ ನಡೆಯುವ ಜುಮುಅ ನಮಾಝ್ ಮಹಿಳೆಯರಿಗೆ ಕಡ್ಡಾಯವಿಲ್ಲ ಎಂದು ಇಸ್ಲಾಂ ಅದೇಶಿಸಿದೆ ಎಂದು ಕಾಂತಪುರಂ ಹೇಳಿದರು.
ಇಸ್ಲಾಮಿನ ವ್ಯವಹಾರಗಳಲ್ಲಿ ತೀರ್ಮಾನ ಕೈಗೊಳ್ಳುವಾಗ ಆ ಕುರಿತು ಪರಿಜ್ಞಾನವಿರುವ ಧಾರ್ಮಿಕ ಪಂಡಿತರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಾಲಯಗಳು ಮುಂದುವರಿಯಬೇಕು. ಧರ್ಮದ ನೈಜ ವಿಚಾರಗಳನ್ನು ಕಡೆಗಣಿಸುವ ಕೆಲವೇ ಕೆಲವು ಮಂದಿಗಳು ಮಾತ್ರ ಮಹಿಳೆಯರ ಮಸೀದಿ ಪ್ರವೇಶಕ್ಕಾಗಿ ವಾದ ಮಂಡಿಸುತ್ತಾರೆ.
ಇಸ್ಲಾಮಿನ ಮೌಲ್ಯಯುತವಾದ ಜ್ಞಾನ ವ್ಯವಸ್ಥೆಯನ್ನು ಉಲ್ಲಂಘಿಸುವರು ಭಯೋತ್ಪಾದನೆ ಮುಂತಾದ ತಪ್ಪಾದ ಹಾದಿಯಲ್ಲೂ ಸಂಚರಿಸುವುದಾಗಿ ಕಾಣಬಹುದಾಗಿದೆ. ಮಹಿಳಾ ಮಸೀದಿ ಪ್ರವೇಶ ಸಂಬಂಧಿಸಿದಂತೆ ಧಾರ್ಮಿಕ ನಿಲುವುಗಳನ್ನು ಸಂಬಂಧಿಸಿದವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾಂತಪುರಂ ಹೇಳಿದರು.
ಮಸೀದಿಯಲ್ಲಿ ಸ್ತ್ರೀ ಪ್ರವೇಶಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ