ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೆಶನ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ “ದಅ್’ವಾ ಕಾನ್ಫರೆನ್ಸ್-19” ಉಳ್ಳಾಲ ಡಿವಿಷನ್ ವತಿಯಿಂದ ಏಪ್ರಿಲ್ 14 ರಂದು ತೊಕ್ಕೊಟು ತಾಜುಲ್ ಉಲಮಾ ಮಸ್ಜಿದ್ ನಲ್ಲಿ ಡಿವಿಶನ್ ಅಧ್ಯಕ್ಷರು ಸಯ್ಯಿದ್ ಖುಬೈಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಅಲ್ ಮದೀನಾದ ಡೈರೆಕ್ಟ್ರ್ ಮೊಹಮ್ಮದ್ ಕುಂಞಿ ಅಂಜದಿ ಉಸ್ತಾದ್ ರವರು ಉದ್ಘಾಟನೆ ಮಾಡಿದರು.
ಡಿವಿಶನ್ ಅಧ್ಯಕ್ಷರು ಸಯ್ಯಿದ್ ಖುಬೈಬ್ ತಂಙಳ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
SSF ದ ಕ ಜಿಲ್ಲಾ ದಅ್’ವಾ ಕನ್ವಿನರ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಯವರು ಮುಖ್ಯ ಪ್ರಭಾಷಣ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಇಹ್ಸಾನ್ ನಾಯಕರಾದ ಅಲ್ತಾಫ್ ಕುಂಪಲ, SSF ಉಳ್ಳಾಲ ಡಿವಿಶನ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಕೆ.ಸಿ. ನಗರ , ಡಿವಿಶನ್ ಕೋಶಾಧಿಕಾರಿ ಹಾಗೂ ಜಿಲ್ಲಾ ನಾಯಕರಾದ ಜಿ.ಎ. ಇಬ್ರಾಹಿಮ್, ಡಿವಿಶನ್ ಕಾರ್ಯದರ್ಶಿ ಜಾಫರ್ ಯು.ಎಸ್ ಹಾಗೂ ಇಲ್ಯಾಸ್ ಪಿಲಿಕೂರು ರವರು ಉಪಸ್ಥಿತರಿದ್ದರು.
SSF ಉಳ್ಳಾಲ ಡಿವಿಶನ್ ದಅ್’ವಾ ಕನ್ವಿನರ್ ಝುಭೈರ್ ಝುಹ್ರಿ ಯವರು ಸ್ವಾಗತಿಸಿದರು.
ಡಿವಿಶನ್ ಕಾರ್ಯದರ್ಶಿ ಹಮೀದ್ ತಲಪಾಡಿ ವಂದಿಸಿದರು.
ಎಂ ಆಶಿಖ್
Ⓜedia Wi🆖
SSF ULLALA DIVISION