SSF ಕೊಪ್ಪ ಡಿವಿಷನ್ ವತಿಯಿಂದ ದಿನಾಂಕ 9/04/2019ರಂದು ISRAR CAMP ಪ್ರಯುಕ್ತ CAMPUS COLLOQUIUM ಕಾರ್ಯಕ್ರಮವು ಹಝ್ರತ್ ಸಯ್ಯದ್ ಸಾದಾತ್ ಶರೀಫುಲ್ ಔಲಿಯಾರವರ ಮಖಾಂ ಝಿಯಾರತ್ ನೊಂದಿಗೆ ಸಿರಾಜುದ್ದೀನ್ ಪಡಿಕ್ಕಲ್ ವೇದಿಕೆ ಬದ್ರೀಯಾ ಜುಮ್ಮಾ ಮಸ್ಜಿದ್ ಕುದುರೆಗುಂಡಿಯಲ್ಲಿ ನಡೆಸಲಾಯಿತು.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ಗಂಟೆ ತನಕ ನಡೆದ ಕಾರ್ಯಕ್ಲಮದಲ್ಲಿ SSF ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿಯಾದ ಶರೀಫ್ ಕುದುರೆಗುಂಡಿ ಸ್ವಾಗತಿಸಿ, ಹನೀಫ್ ಮದನಿ ಶೆಟ್ಟಿಕೊಪ್ಪ ರವರು ಇಮಾಮ್ ಗಝ್ಝಾಲಿ ರ.ಅ ವಿಷಯ ಕುರಿತು ತರಗತಿ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Ideal students ವಿಷಯದ ಬಗ್ಗೆ ಅಶ್ರಫ್ ಸಖಾಫಿ ಮಾಗುಂಡಿ ರವರು ತರಗತಿಯನ್ನು ನಡೆಸಿದರು.
ಮಧ್ಯಾಹ್ನದ ನಂತರ ISRAR CAMP ಪ್ರಯುಕ್ತ OFFICINA AND EFFICIENCY TALK ಕಾರ್ಯಕ್ರಮವನ್ನು ನಡೆಸಲಾಯಿತು.
Team spirit ವಿಷಯದ ಬಗ್ಗೆ SSF ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಕುದುರೆಗುಂಡಿ ರವರು ತರಗತಿಯನ್ನು ನಡೆಸಿದರು.
ಪ್ರವಾದಿ(ಸ.ಅ)ರ ಜೀವನದ ಕುರಿತು ಅಬ್ದುಲ್ ರಹ್ಮಾನ್ ಶೆಟ್ಟಿಕೊಪ್ಪ ರವರು ತರಗತಿಯನ್ನು ನಡೆಸಿದರು.
SSF ಎಂದರೇನು? SSF ಯಾಕೆ ಬೇಕು? SSF ನಿಂದ ನಮಗೇನು ಲಾಭ? ನಮ್ಮ ಪ್ರವರ್ತನೆ ಹೇಗೆ ಇರಬೇಕು? SSF ನ ಅಭಿಮಾನಿ ಯಾರು? SSF ನ ಪ್ರವರ್ತಕ ಯಾರು? ಎಂಬ ವಿಷಯವನ್ನು ಎಲ್ಲಾ ಕಾರ್ಯಕರ್ತರ ಮನತಲ್ಲಣಗೊಳ್ಳುವಂತೆ ಲತೀಫ್ ಮದನಿ ಕೊಜೆಪಾಡಿರವರು ತರಗತಿಯನ್ನು ನಡೆಸಿದರು.
Efficiecy talk ಪ್ರಯುಕ್ತ SSF and SYS ಕಾರ್ಯಕರ್ತರ ಜಂಟಿ ಅಧಿವೇಷನವನ್ನು ನಡೆಸಿ ಮುಂದಿನ ದಿನಗಳ ಸಂಘಟನೆಯ ಪ್ರವರ್ತನೆಯ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಳಿಗ್ಗೆ ಆರಂಭಗೊಂಡು ಸಂಜೆಯವರೆಗೆ ನಡೆದ ಈ ಒಂದು ಸುಂದರವಾದ ಕ್ಯಾಂಪ್ ನಲ್ಲಿ *ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫುದ್ದೀನ್ ಕುದುರೆಗುಂಡಿ,ಡಿವಿಷನ್ ಅಧ್ಯಕ್ಷರಾದ ಸ್ವಾದಿಕ್ ಶೃಂಗೇರಿ, SYS ಕೊಪ್ಪ ಡಿವಿಷನ್ ಅಧ್ಯಕ್ಷರಾದ ರಜಬ್ ನಾಗರಮಕ್ಕಿ, ಜಿಲ್ಲಾ ನಾಯಕರಾದ ಸುಲೈಮಾನ್,ಅಬ್ದುಲ್ ರೆಹಮಾನ್ ಸಲೀಮ್,ಸಮೀಮ್,ಆರೀಫ್,ಇರ್ಫಾನ್ ಉಪಸ್ಥಿತರಿದ್ದರು
ಕ್ಯಾಂಪ್ ನ ವಂದನಾರ್ಪಣೆಯನ್ನು SSF ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ರವರು ನೆರವೇರಿಸಿದರು.