ರಿಯಾದ್: ಸೌದಿಯ ಸಾರ್ವಜನಿಕ ಪ್ರದೇಶಗಳಲ್ಲಿ ಪಾಲಿಸಬೇಕಾದ ನಿಯಮಗಳಿಗಾಗಿ ರಚಿಸಲಾದ ಕರಡುಗಳನ್ನು ಶೂರಾ ಕೌನ್ಸಿಲ್ ಅನುಮೋದಿಸಿದೆ. ಕಾನೂನನ್ನು ಉಲ್ಲಂಘಿಸುವವರಿಗೆ ಶಿಕ್ಷೆ ಮತ್ತು ದಂಡಗಳನ್ನು ವಿಧಿಸುವಂತೆ ಶೂರಾ ಶಿಫಾರಸು ಮಾಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಸಂಪ್ರದಾಯಗಳನ್ನು ಈ ಕರಡಿನಲ್ಲಿ ನಿರ್ದಿಷ್ಟವಾಗಿ ಸೂಚಿಸಿದೆ. ಸಭ್ಯವಲ್ಲದ ಉಡುಗೆ ಮತ್ತು ದೇಶದ ನಾಗರಿಕತೆಗೆ ಕುಂದು ಉಂಟುಮಾಡಬಲ್ಲ ಚಿತ್ರಗಳಿರುವ ಉಡುಪು ಧರಿಸುವುದು ದಂಡ ಪಾವತಿಸಬಹುದಾದ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳ ಗೋಡೆಗಳ ಮೇಲೆ ಪರವಾನಗಿ ಇಲ್ಲದೆ ಬರೆಯುವುದು ಮತ್ತು ಚಿತ್ರ ಬಿಡಿಸುವುದು ಶಿಕ್ಷಾರ್ಹವಾಗಿದೆ.
ಅವಿವೇಕದ ಭಾಷಣ ಮತ್ತು ನಡವಳಿಕೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಮಸೀದಿಗಳ ಗೌರವ ಮತ್ತು ಪವಿತ್ರತೆಗೆ ಕುಂದು ಮಾಡಬಲ್ಲ ವರ್ತನೆಗಳು ನಿಯಮಾವಳಿಯಲ್ಲಿ ಒಳಗೊಂಡಿದೆ.
ಶೂರಾ ಕೌನ್ಸಿಲ್ ನೀಡಿದ ಹೇಳಿಕೆಯಲ್ಲಿ ಆನ್ ಲೈನ್, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮ ಮೂಲಕ ಅವಿವೇಕದ ವರ್ತನೆಗಳನ್ನು ಕೂಡ ಉಲ್ಲೇಖಿಸಲಾಗಿದೆ. ಪುನರಾವರ್ತನೆಯಂತೆ ಶಿಕ್ಷೆ ಮತ್ತು ದಂಡಗಳು ದ್ವಿಗುಣಗೊಳ್ಳಲಿವೆ ಎಂದು ವರದಿಯು ತಿಳಿಸಿದೆ.