ಕೈಸ್ಟ್ ಚರ್ಚ್, ಮಾ.22: ನ್ಯೂಝಿಲೆಂಡಿನ ಕ್ರೈಸ್ಟ್ ಚರ್ಚ್‍ನ ಅಲ್ ನೂರ್ ಮಸೀದಿಯಲ್ಲಿ ಭಯೋತ್ಪಾದನಾ ದಾಳಿ ನಡೆದು ಒಂದು ವಾರ ಪೂರ್ತಿಯಾಗಿದ್ದು ಇಂದು ಮಸೀದಿ ಇಮಾಂ ಗಮಾಲ್ ಫೌದರ ಕುತ್‍ಬವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲಾಯಿತು. ಕುತುಬ ಕೇಳಲು ನ್ಯೂಝಿಲೆಂಡಿನ ಪ್ರಧಾನಿ ಜೆಸಿಂತಾ ಅರ್ಡನ್‍ರ ಸಹಿತ 5000ಕ್ಕೂ ಹೆಚ್ಚು ಮಂದಿ ಮಸೀದಿಯ ಮುಂದಿನ ಹಾಗ್ಲಿ ಪಾರ್ಕಿಗೆ ಬಂದಿದ್ದರು.

ನಮ್ಮ ಹೃದಯ ಒಡೆದಿದೆ. ಆದರೆ ನಮ್ಮ ಒಗ್ಗಟ್ಟು ಒಡೆದಿಲ್ಲ. ನಾವು ಜೀವಿಸುತ್ತಿದ್ದೇವೆ. ಒಟ್ಟಿಗೆ, ನಮ್ಮ ಒಗ್ಗಟ್ಟನ್ನು ಒಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಇಮಾಂ ಹೇಳಿದರು.
“ಮೃತಪಟ್ಟವರ ಕುಟುಂಬ ಸದಸ್ಯರೊಡನೆ ಇದನ್ನೆ ಹೇಳುತ್ತೇನೆ. ನಿಮ್ಮ ಪ್ರೀತಿ ಪಾತ್ರರ ಸಾವು ಸುಮ್ಮನಾಗದು. ಅವರ ರಕ್ತ ಆಶಾವಾದದ ಬೀಜವಾಗಲಿದೆ. ಪ್ರೀತಿ, ಕರುಣೆ ನ್ಯೂಝಿಲೆಂಡಿಗೆ ನೀಡಿದ್ದು ನಾಶಪಡಿಸಲಾಗದ ದೃಢತ್ವವನ್ನಾಗಿದೆ. ಪ್ರಧಾನಿಯ ಕರುಣೆ ವಿಶ್ವ ಲೋಕದ ನಾಯಕರಿಗೆ ಪಾಠವಾಗಿದೆ. ನಮ್ಮನ್ನು ಒಗ್ಗೂಡಿಸಿ ನಿಲ್ಲಿಸಿದ್ದಕ್ಕೆ, ಸ್ಕಾರ್ಪಿನಿಂದ ಗೌರವಿಸಿದಕ್ಕೆ ಕೃತಜ್ಞತೆ ಹೇಳುತ್ತೇನೆ.ಇಸ್ಲಾಮೊಫೋಬಿಯದಿಂದಾಗಿ ಮುಸ್ಲಿಮರನ್ನು ಮನುಷ್ಯರಲ್ಲದಂತೆ ನೋಡಲಾಗುತ್ತಿದೆ.. ಜಗತ್ತು ದ್ವೇಷಪೂರಿತ ಭಾಷಣ, ಭೀತಿಯ ರಾಜಕೀಯವನ್ನು ಕೊನೆಗೊಳಿಸಬೇಕು. ಕಳೆದ ವಾರ ನಡೆದ ದುರಂತ ಭಯೋತ್ಪಾದನೆಗೆ ಬಣ್ಣವೋ, ಜಾತಿಯೋ, ಧರ್ಮವೋ ಇಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ. ಬಿಳಿಯತ್ವದ ಹೆಚ್ಚುಗಾರಿಕೆ ಜಾಗತಿಕ ಮಟ್ಟದಲ್ಲಿ ಮನುಷ್ಯರಿಗೆ ಬೆದರಿಕೆಯಾಗಿದೆ. ಅದು ಕೊನೆಗೊಳ್ಳಬೇಕಾಗಿದೆ’ ಎಂದು ಇಪ್ಪತ್ತು ನಿಮಿಷದ ಖುತುಬಾದಲ್ಲಿ ಇಮಾಂ ಹೇಳಿದರು.
ಕಪ್ಪು ಉಡುಪಿನಲ್ಲಿ ಪ್ರಧಾನಿ ಜೆಸಿಂತಾರ ಸಹಿತ ಅನೇಕ ಮಂದಿ ಶಿರೋವಸ್ತ್ರ ಧರಿಸಿ ಕುತುಬ ಆಲಿಸಿದರು. ಮಹಿಳಾ ಪೊಲೀಸರು ಕೂಡ ಶಿರವಸ್ತ್ರ ಹಾಗೂ ಕೆಂಪು ಗುಲಾಬಿಯನ್ನು ಉಡುಪಿಗೆ ಲಗತ್ತಿಸಿದ್ದರು.
ಮಸೀದಿಯಲ್ಲಿ ಭಯೋತ್ಪಾದಕನ ಗುಂಡು ಹಾರಾಟದಲ್ಲಿ 50 ಮಂದಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು. ಬಳಿಕ ಪ್ರಧಾನಿ ಮಾತಾಡಿದರು. ನ್ಯೂಝಿಲೆಂಡ್ ನಿಮ್ಮ ಜೊತೆ ಅಳುತ್ತಿದೆ. ನಾವು ಒಂದೇ ಆಗಿದ್ದೇವೆ ಎಂದು ಜೆಸಿಂತಾ ಹೇಳಿದರು.
Call to prayer in Christchurch, outside the Al Noor mosque pic.twitter.com/NwOrs9Isvi
— Martin Fricker (@martinfricker) March 22, 2019
ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಲ್ಲಿ ಹೆಚ್ಚಿನವರು ಪಾಕಿಸ್ತಾನೀಯರು. ಭಾರತ, ಮಲೇಶ್ಯ ,ಇಂಡೊನೇಶ್ಯ, ಸೊಮಾಲಿಯ, ಅಫ್ಘಾನಿಸ್ತಾನ,, ಬಾಂಗ್ಲಾದೇಶದವರು ಕೂಡ ದಾಳಿಯಲ್ಲಿ ಮೃತಪಟ್ಟಿದ್ದರು.
Masha Allah