ರಿಯಾದ್: ಸಂದರ್ಶನ ವೀಸಾದಲ್ಲಿ ಆಗಮಿಸಿರುವವರ ವಿಸಾದ ಅವಧಿ ಮುಕ್ತಾಯಗೊಳ್ಳುವ ಏಳು ದಿನಗಳ ಮುಂಚಿತವಾಗಿ, ಆನ್ ಲೈನ್ ಮೂಲಕ ವಿಸ್ತರಿಸಬಹುದು ಎಂದು ಸೌದಿ ಪಾಸ್ಪೋರ್ಟ್ ಇಲಾಖೆಯು ಘೋಷಿಸಿದೆ.
ಹೊಸ ವೀಸಾ ನಿಯಮವು ಕುಟುಂಬದೊಂದಿಗೆ ವಾಸ ಇರುವವರಿಗೆ ಅನುಗ್ರವಾಗಲಿದೆ.
ಪ್ರಸಕ್ತ ಸೌದಿ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ನಲ್ಲಿ ಸಂದರ್ಶನ ವಿಸಾಗೆ ಸಲ್ಲಿಸಿದ ಅರ್ಜಿಯ ನಕಲಿಯೊಂದಿಗೆ ಚೇಂಬರ್ ಆಫ್ ಕಾಮರ್ಸ್ ನ ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ವಿದೇಶಾಂಗ ಸಚಿವಾಲಯದಿಂದ 24 ಗಂಟೆಗಳ ಒಳಗೆ ವೀಸಾ ವಿಸ್ತರಿಸಿ ಲಭಿಸಲಿದೆ.