ಯುಎಇ ಅಧ್ಯಕ್ಷೀಯ ಅರಮನೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ

ದುಬೈ: ಯುಎಇ ರಾಜಧಾನಿ ನಗರದ ಅರಮನೆಯ ಬಾಗಿಲು ಎಂದು ಕರೆಯಲಾಗುವ ಅಧ್ಯಕ್ಷೀಯ ಅರಮನೆಯನ್ನು ನೋಡಲು ಸಾರ್ವಜನಿಕರಿಗೆ ಅವಕಾಶವನ್ನು ನೀಡಲಾಗಿದ್ದು, ಖಸರ್ ಅಲ್ ವತನ್ ಎನ್ನುವ ಭಾಗಕ್ಕೆ ಪ್ರವೇಶವನ್ನು ನೀಡಲಾಗಿದೆ.

ಇದು ಅರಬ್ ವಾಸ್ತುಶಿಲ್ಪ ಮತ್ತು ಕಲೆಗಳ ಅಭೂತ ದೃಶ್ಯಗಳನ್ನು ಹೊಂದಿದೆ.ಯುಎಇಯ ಕ್ಯಾಬಿನೆಟ್ ಮತ್ತು ಸುಪ್ರೀಂ ಕೌನ್ಸಿಲ್‌ ಸಭೆ ನಡೆಯುವ ಸ್ಥಳವಾಗಿದೆ ಅಧ್ಯಕ್ಷೀಯ ಅರಮನೆ. ಯುಎಇಯು ಅತ್ಯಂತ ಸುರಕ್ಷತೆಯಿಂದ ಸಂರಕ್ಷಿಸುವ ಸಂಪ್ರದಾಯ ಮತ್ತು ವಿಜ್ಞಾನದ ಸ್ಮಾರಕವಾಗಿದೆ. ಈ ಅರಮನೆಯು ಬೃಹತ್ತಾದ ವಿಶಾಲ ಖಸ್ರ್ ಅಲ್-ವತನ್ ಗ್ರಂಥಾಲಯವನ್ನೂ ಹೊಂದಿದೆ. ಯುಎಇ ಇತಿಹಾಸ ಮತ್ತು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಪಡಿಯಚ್ಚುಗಳನ್ನು ಇಲ್ಲಿ ಗುರುತಿಸಲಾಗಿದೆ.

ಐದು ವರ್ಷಗಳ ಕಾಮಗಾರಿಯಿಯ ಬಳಿಕ ಅರಮನೆಯ ನಿರ್ಮಾಣವು 2015 ರಲ್ಲಿ ಪೂರ್ಣಗೊಂಡಿತು. ಅಬುಧಾಬಿಯ ಎಮಿರೇಟ್ಸ್ ಪ್ಯಾಲೇಸ್ ಹತ್ತಿರ 150 ಹೆಕ್ಟೇರ್ ಭೂಮಿಯಲ್ಲಿ ಈ ಅರಮನೆ ಇದೆ. ಈ ಅರಮನೆಯು ಎಮಿರೇಟ್ಸ್ ಅರಮನೆ ಮತ್ತು ಶೈಖ್ ಝಾಹಿದ್ ಗ್ರ್ಯಾಂಡ್ ಮಸೀದಿಯ ವಾಸ್ತುಶಿಲ್ಪದ ಶೈಲಿಗಯೊಂದಿಗೆ ಮಿಳಿತಗೊಂಡಿದ್ದು, ಆಕರ್ಷಕವಾಗಿ ಕಣ್ಮನಸೆಳೆಯುತ್ತಿದೆ.

ವಯಸ್ಕರಿಗೆ ಪ್ರವೇಶ ಶುಲ್ಕ 60 ದಿರ್ಹಮ್ ಮತ್ತು 4 ರಿಂದ 17 ವಯಸ್ಸಿನವರಿಗೆ 30 ದಿರ್ಹಮ್ ಶುಲ್ಕ ಪಾವತಿಸಬೇಕಾಗುತ್ತದೆ. 3 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಅನೇಕ ನಾಯಕರು ಇಲ್ಲಿಗೆ ಭೇಟಿ ನೀಡಿದ್ದಾರೆ.

One thought on “ಯುಎಇ ಅಧ್ಯಕ್ಷೀಯ ಅರಮನೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ

Leave a Reply

Your email address will not be published. Required fields are marked *

error: Content is protected !!