ಸೌದಿ: ರೆಸ್ಟಾರೆಂಟ್‌ ಮತ್ತು ಕೆಫೆಗಳಲ್ಲೂ ದೇಶೀಕರಣ

ರಿಯಾದ್: ಸೌದಿ ಅರೇಬಿಯಾದಲ್ಲಿ ರೆಸ್ಟಾರೆಂಟ್‌ಗಳು ಮತ್ತು ಕೆಫೆಗಳಲ್ಲಿ ಕೆಲಸ ಮಾಡುವ ಸೌದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದ್ದು, ಈ ಕುರಿತು ಕಾರ್ಮಿಕ ಸಚಿವಾಲಯವು ರೆಸ್ಟೋರೆಂಟ್ ಮತ್ತು ಕೆಫೆ ಅಸೋಸಿಯೇಷನ್ ನಡುವಿನ ಒಪ್ಪಂದಕ್ಕೆ ಸಹಿ ಮಾಡಿದೆ.

ಒಪ್ಪಂದವನ್ನು ಜಾರಿಗೊಳಿಸಿದರೆ ಅನೇಕ ವಿದೇಶಿಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ.

ಕಾರ್ಮಿಕ ಸಚಿವಾಲಯ, ರೆಸ್ಟಾರೆಂಟ್ ಮತ್ತು ಕೆಫೆ ಅಸೋಸಿಯೇಷನ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಫಂಡ್ ಒಪ್ಪಂದಕ್ಕೆ ಸಹಿಹಾಕಿದ್ದು, ರೆಸ್ಟೋರೆಂಟ್ ಮತ್ತು ಕೆಫೆಗಳಲ್ಲಿ ಕೆಲಸ ಮಾಡುವ ಸೌದಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹೊಸ ಒಪ್ಪಂದದ ಗುರಿಯಾಗಿದೆ. ಮತ್ತು ಈ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಹಲವಾರು ಇತರ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.

ಪ್ರಸಕ್ತ. 1,156 ಮಹಿಳೆಯರು ಸೇರಿದಂತೆ 36,542 ಸೌದಿಗಳು ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಈ ವಲಯದಲ್ಲಿರುವ ಒಟ್ಟು ಶೇಕಡಾದಲ್ಲಿ 13 ಶೇಕಡಾ ಮಾತ್ರವಾಗಿದೆ. ಆದರೆ 3500 (3588) ರಷ್ಟು ಮಹಿಳೆಯರ ಸಮೇತ ಸುಮಾರು ಮೂರು ಲಕ್ಷ ವಿದೇಶಿಯರು (2,89,491) ಈ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸೌದಿಗಳಿಗೆ ಉದ್ಯೋಗಾವಕಾಶ ಒದಗಿಸುವುದು ಹೊಸ ಒಡಂಬಡಿಕೆಯ ಉದ್ದೇಶವಾಗಿದ್ದು, ಶೇ 30ರಷ್ಟು ಸ್ಥಳೀಯರಿಗೆ ಅವಕಾಶ ಹೊಂದಿಸಲಾಗುತ್ತಿದೆ. ಈ ಮೂಲಕ ಸೌದಿಗಳಿಗೆ 50,000 ಕ್ಕಿಂತ ಹೆಚ್ಚಿನ ಉದ್ಯೋಗಗಳು ದೊರಕಲಿವೆ.

ಕಳೆದ ವರ್ಷದ ಲೆಕ್ಕಾಚಾರ ಪ್ರಕಾರ ಹೊಸ ಕಾಫಿ ಹೌಸ್ ಗಳಿಗಾಗಿ 6272 ವಾಣಿಜ್ಯ ದಾಖಲಾತಿ ಅನುಮತಿಯನ್ನು ನೀಡಲಾಯಿತು. ಇದು ಹಿಂದಿನ ವರ್ಷಕ್ಕಿಂತ 21 ಶೇಕಡಾ ಹೆಚ್ಚಾಗಿದೆ. ಇತ್ತೀಚೆಗೆ ರೆಸ್ಟೋರೆಂಟ್, ಕಾಫಿ ಹೌಸ್‌ಗಳಲ್ಲಿ ಸಂಗೀತ, ಹಾಸ್ಯ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದ್ದು, ಈ ವಲಯದಲ್ಲಿ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!