ದುಬೈ: ಯುಎಇಯಲ್ಲಿರುವ ಭಾರತೀಯ ವಲಸಿಗರ ಪಾಸ್ ಪೋರ್ಟ್‌ಗಳನ್ನು ನವೀಕರಿಸಲು ಅನುಕೂಲವಾಗುವಂತೆ ಭಾರತೀಯ ರಾಯಭಾರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅಪ್ಲಿಕೇಶನ್ ಸಲ್ಲಿಸಿ ಐದು ವೃತ್ತಿ ದಿನಗಳೊಳಗಾಗಿ ಪಾಸ್‌ಪೋರ್ಟ್ ನೀಡಲಾಗುತ್ತದೆ.
ಈ ಹಿಂದೆ ಪಾಸ್‌ಪೋರ್ಟ್ ಲಭಿಸಲು ವಿಚಾರಣೆ ಪೂರ್ಣಗೊಂಡು 40 ದಿನಗಳ ವರೆಗೆ ತಗುಲುತ್ತಿದ್ದವು. 2016 ರ ನಂತರ ಯಾವುದೇ ಪಾಸ್‌ಪೋರ್ಟ್ ನವೀಕರಣಗೊಳ್ಳಲು ಐದು ದಿನಗಳವರೆಗೆ ಸಾಕು ಎನ್ನು ನಿಯಮ ಜಾರಿಯಲ್ಲಿದೆ. ಬಿಎಲ್ಲೆಸ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಅಗತ್ಯವಿರುವ ದಾಖಲೆಗಳು
* ಇಎಪಿ ಫಾರ್ಮ್-1 ಅದನ್ನು ಬಿಎಲ್ಎಸ್ ಮತ್ತು ಕಾನ್ಸುಲೇಟ್‌ನ ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಬಹುದು.
* ಫೋಟೋ ಲಗತ್ತಿಸಿದ ವೈಯಕ್ತಿಕ ಪಿರೈಲರ್ ಫಾರ್ಮ್. ಇದು ಮೇಲೆ ವಿವರಿಸಿದ ವೆಬ್ ಸೈಟ್ ನಲ್ಲಿ ಲಭ್ಯವಿದೆ.
* 6 ಹೊಸ ಫೋಟೋ. 51 *51 ಗಾತ್ರದ್ದು, ಬಿಳಿ ಹಿನ್ನಲೆಯಲ್ಲಿ ಕಡು ಬಣ್ಣದ ಬಟ್ಟೆಗಳನ್ನು ಧರಿಸುವುದು ಮುಖದ ಸುತ್ತಲೂ ಕಿವಿ ಸಹಿತ ಕಾಣುವಂತೆ ತೆಗೆದುಕೊಳ್ಳಬೇಕು.
* ವೀಸಾ ಪೇಜ್ ಸೇರಿದಂತೆ ಅಸ್ತಿತ್ವದಲ್ಲಿರುವ ಮೂಲ ಪಾಸ್ಪೋರ್ಟ್ ಮತ್ತು ಫೋಟೋ ಪ್ರತಿಗಳು
* ಫೋಟೋ ಲಗತ್ತಿಸಿದ ಗುರುತಿನ ದಾಖಲೆ. ಎಮಿರೇಟ್ ಐಡಿ, ಚಾಲನಾ ಪರವಾನಗಿ, ಕಾರ್ಮಿಕ ಕಾರ್ಡ್ ಇತ್ಯಾದಿ.
ಅಪ್ಲಿಕೇಶನ್ ಸಲ್ಲಿಸಲು ಅರ್ಜಿದಾರರು ನೇರವಾಗಿ ತೆರಳುವ ಅಗತ್ಯವಿದೆ.
ಈ ನಿಯಮಗಳು ತಿಳಿದಿರಲಿ
1. ಕಾಲಾವಧಿ ಮುಗಿದು ಗ್ರೇಸ್ ಪೆರೇಡ್ ನಲ್ಲಿರವವರು ಫೋಟೊ ಲಗತ್ತಿಸಿದ ಕಂಪನಿಯ ಅಪ್ಲಿಕೇಶನ್ ಮತ್ತು ಕಂಪೆನಿಯ ಲೈಸೆನ್ಸ್ ನಖಲಿ ಯನ್ನು ಜೊತೆಗೆ ಸಲ್ಲಿಸಬೇಕು.
ಅವಲಂಬಿತ ವೀಸಾದಲ್ಲಿರುವವರು ಪ್ರಾಯೋಜಕರ ಛಾಯಾಚಿತ್ರವಿರುವ ಪಾಸ್ಪೋರ್ಟ್ ನಕಲುಗಳೊಂದಿಗೆ ಅರ್ಜಿ ಸಲ್ಲಿಸಬೇಕು.
2. ವೀಸಾ ಮತ್ತು ಗ್ರೇಸ್ ಅವಧಿ ಮುಗಿದಲ್ಲಿ, ಪಾಸ್ಪೋರ್ಟ್ ಅನ್ನು ನವೀಕರಿಸಲು ಅಪ್ಲಿಕೇಶನ್ ಸಲ್ಲಿಸುವಾಗ ವಿಳಂಬದ ಕಾರಣ ಕುರಿತ ವಿವರಣೆಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
3. ಮಹಿಳೆಯರು ಸಲ್ಲಿಸುವಾಗ”ಹೌಸ್ ವೈಫ್” ಎಂದು ನಮೂದಿಸಬೇಕು ಮತ್ತು ಪ್ರಾಯೋಜಕ ತನ್ನ ಪತಿಯಾಗದಿದ್ದಲ್ಲಿ ಪ್ರಾಯೋಜಕರ ಎನ್ಒಸಿ ಮತ್ತು ಪಾಸ್ಪೋರ್ಟ್ ಪ್ರತಿಯನ್ನು ಅಪ್ಲಿಕೇಶನ್ ಜೊತೆ ಸಲ್ಲಿಸಬೇಕು.
4. ಪಾಸ್ಪೋರ್ಟ್ ಮುಕ್ತಾಯ ದಿನಾಂಕದಿಂದ ಆರು ತಿಂಗಳ ಅವಧಿಯನ್ನು ಮೀರಿದರೆ, ನವೀಕರಣದ ವಿಳಂಬವಾದ ಬಗೆಗಿನ ವಿವರಣೆಯನ್ನು ನೀಡಬೇಕು. ಒಂದು ವರ್ಷದ ಅವಧಿ ಮೀರಿದರೆ ವಿಳಂಬದ ಕಾರಣದ ಜೊತೆಗೆ, ದೂತಾವಾಸ ಕೇಂದ್ರದ ಮುಂಗಡ ಪತ್ರವನ್ನು ಲಗತ್ತಿಸ ಬೇಕು.
5. ಅಬುಧಾಬಿ ಅಥವಾ ಅಲ್ ಐನ್ನಲ್ಲಿರುವವರು ದುಬೈ ನಲ್ಲಿ ನವೀಕರಣಕ್ಕೆ ಅಪೇಕ್ಷೆ ಸಲ್ಲಿಸುವುದಾದರೆ ವಿದ್ಯುತ್ ಬಿಲ್ ನ ಪ್ರತಿಯನ್ನು ಸಲ್ಲಿಸಬೇಕು.
6. ಅರ್ಜಿದಾರರ ಸಹಿ ಅಥವಾ ಹೆಬ್ಬೆಟ್ಟು ಕಪ್ಪು ಶಾಯಿಯಲ್ಲಿ ನಿಗದಿತ ಸ್ಥಳದಲ್ಲಿ ಬದಿಗೆ ಪಸರಿಸದಂತೆ ಪಾಸ್ಪೋರ್ಟ್ ಅಧಿಕಾರಿಯ ಸಮ್ಮುಖದಲ್ಲಿ ಮಾಡಬೇಕು. ಅಸ್ತಿತ್ವದಲ್ಲಿರುವ ಪಾಸ್ ಪೋರ್ಟ್ ಗೆ ಮಾಡಲಾದ ಸಹಿಯನ್ನೇ ಅರ್ಜಿಯಲ್ಲಿಯೂ ಸಲ್ಲಿಸಬೇಕು.
ಶುಲ್ಕ:
- 36 ಪುಟಗಳ ಪಾಸ್‌ಪೋರ್ಟ್ ಗೆ 285 ದಿರ್ಹಂ ಪಾವತಿಸಬೇಕು.
- 60 ಪುಟ ಜಂಬೋ ಪಾಸ್ಪೋರ್ಟ್ -380 ದಿರ್ಹಂ.
- ತತ್ಕಾಲ್ ಸೇವೆಗಾಗಿ – 950 ದಿರ್ಹಂ.
- ಸೇವಾ ಶುಲ್ಕ – 9 ದಿರ್ಹಂ.
- ಇಂಡಿಯನ್ ಕಮ್ಯುನಿಟಿ ವೆಲ್ಫೇರ್ ಫಂಡ್ – 8 ದಿರ್ಹಂ.