janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಅದಾನಿ ಗ್ರೂಪಿಗೆ

ಬೆಂಗಳೂರು.ಫೆ,25: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಣೆಯು ಖಾಸಗಿ ಕಂಪೆನಿಯಾದ ಅದಾನಿ ಗ್ರೂಪಿಗೆ ಲಭಿಸಲಿದೆ. ಅಲ್ಲದೇ ತಿರುವನಂತಪುರಂ, ಗುವಾಹಾಟಿ, ಲಕ್ನೌ, ಅಹಮದಾಬಾದ್ ಮತ್ತು ಜೈಪುರ್ ವಿಮಾನ ನಿಲ್ದಾಣಗಳ ನಿರ್ವಹಣೆ ಕೂಡಾ ಅದಾನಿಗೆ ಲಭಿಸಿದೆ.

ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮುಕ್ತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನ ಪ್ರಕ್ರಿಯೆಯ ಅಂಗವಾಗಿ ಗುವಾಹಾಟಿ, ತಿರುವನಂತಪುರಂ, ಲಕ್ನೌ, ಮಂಗಳೂರು, ಅಹಮದಾಬಾದ್ ಮತ್ತು ಜೈಪುರ್ ಸೇರಿ ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಬಿಡ್ ನ್ನು ಕರೆದಿತ್ತು.

ಇದರನ್ವಯ ಅದಾನಿ ಗ್ರೂಪ್ ಮೊದಲ ಸ್ಥಾನವನ್ನು ಪಡೆದಿದ್ದು, ಕೆಎಸ್ಐಡಿಸಿ ಎರಡನೇ ಸ್ಥಾನವನ್ನು ಗಳಿಸಿದೆ.
ಫೆ.28 ರಂದು ಈ ಕುರಿತ ಅಧಿಕೃತ ಘೋಷಣೆ ನಡೆಯಲಿದೆ.

error: Content is protected !! Not allowed copy content from janadhvani.com