janadhvani

Kannada Online News Paper

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ರಿ)ಇಳಂತಿಲ ಮುರ ಶಾಖೆ ವತಿಯಿಂದ ಜಿಲ್ಲೆಯ ಎರಡನೇ ಅತಿದೊಡ್ಡ ದಶವಾರ್ಷಿಕ ಅಜ್ಮೀರ್ ಆಂಡ್ ನೆರ್ಚೆ ಮಾರ್ಚ್ 16 ಮತ್ತು 17 ರಂದು ನಡೆಯಲಿದೆ.
ಕಾರ್ಯಕ್ರಮದ ಮೊದಲ ದಿನವಾದ ಮಾರ್ಚ್ 16 ರಂದು ಮುಖ್ಯಪ್ರಭಾಷಕರಾಗಿ ಮಸ್ಊದ್ ಸಖಾಫಿ ಗೂಡಲ್ಲೂರ್
ಭಾಗವಹಿಸಲಿದ್ದಾರೆ.

ಸಮಾರೋಪ ದಿನವಾದ *ಮಾರ್ಚ್ 17 ರಂದ ಗೌರವಾರ್ಪಣಾ ಕಾರ್ಯಕ್ರಮ ಹಾಗೂ ಅಸರ್ ನಮಾಜಿನ ಬಳಿಕ ಅಜ್ಮೀರ್ ಮೌಲಿದ್ ನಡೆಯಲಿದೆ. ಮಗ್ರೀಬ್ ನಮಾಜಿನ ಬಳಿಕ ಬಹು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಗೈಯಲಿದ್ದಾರೆ.

ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ SSF ಕರ್ನಾಟಕ ರಾಜ್ಯ ಆದ್ಯಕ್ಷರಾದ ಅಸ್ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್ಶಾರ್ ಇವರಿಗೆ ಗೌರವಾರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಅಯೋಜಕರು ತಿಳಿಸಿದ್ದಾರೆ.
ವರದಿ : ನವಾಝ್ ಮುರ

error: Content is protected !!
%d bloggers like this: