ಈಗ ತಂತ್ರಜ್ಞಾನ ಬದಲಾಗಿದೆ, ಜನ್ರೂ ಬದಲಾಗಿದ್ದಾರೆ. ಎಲ್ಲದ್ದಕ್ಕೂ ಒಂದೇ ಉತ್ತರ…ಗೂಗಲ್! ಒಂದು ಶಬ್ಧದ ಅರ್ಥ ಹುಡುಕೋದ್ರಿಂದ ಹಿಡಿದು, ಒಂದು ಅಡ್ರೆಸ್ ಹುಡುಕೋವರೆಗೂ ಗೂಗಲ್ ಮಹಾಶಯನೇ ಬೇಕು!
ತಂತ್ರಜ್ಞಾನವನ್ನು ಬಳಸೋದು ಸರಿ, ಆದರೆ ತಮ್ಮ ಬುದ್ದಿಯನ್ನು ಬಳಸದೇ, ಕಣ್ಮುಚ್ಚಿ ತಂತ್ರಜ್ಞಾನವನ್ನು ಬಳಸಿದರೆ ಏನಾಗುತ್ತೆ ಎಂಬುವುದಕ್ಕೆ ಈ ಕೆಳಗಿನ ಘಟನೆಯೇ ನಿದರ್ಶನ.
ಇಂಡೋನೇಶ್ಯಾದಲ್ಲಿ ಗೂಗಲ್ ಮ್ಯಾಪ್ ಬಳಸಿ ಅದನ್ನೇ ಫಾಲೋ ಮಾಡಿಕೊಂಡು ಹೋದ ಟ್ರಕ್ಕೊಂದು ನದಿಗೆ ಬಿದ್ದ ಘಟನೆ ನಡೆದಿರುವುದನ್ನು ಅಲ್ಲಿನ ‘ದಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.
ಬಾಲಿ ಬಳಿ ಉಬೆದ್‌ನಲ್ಲಿ ಸಿಂಗಕೆರ್ಟಾ ಊರಿಗೆ ಟ್ರಕ್ ಡ್ರೈವರ್ ಒಬ್ಬ ಗೂಗಲ್ ಮ್ಯಾಪ್ ಆನ್ ಮಾಡಿ ಹೊರಟಿದ್ದಾನೆ.
ದುರಾದೃಷ್ಟವಶಾತ್, ಆ ದಾರಿ ದ್ವಿಚಕ್ರ ವಾಹನಗಳಿಗೆ ಮಾತ್ರ ಇರುವಂಥದ್ದು. ಈ ವಿಷಯವನ್ನು ತಿಳಿಯದ ಚಾಲಕ ಕಣಿವೆಯ ತುದಿಯಲ್ಲಿರುವ ಸೇತುವೆಗೆ ಬಂದು,ದಾರಿ ಕಾಣದೆ ಟ್ರಕ್ ವಾಪಾಸು ತಿರುಗಿಸುವ ಪ್ರಯತ್ನಪಟ್ಟರೂ ಸಾಧ್ಯವಾಗದೇ ಟ್ರಕ್ ಜೊತೆಗೆ ಕೆಳಗೆ ಬಿದ್ದಿದ್ದಾನೆ. ಅದನ್ನು ಕಂಡ ಸ್ಥಳೀಯರು, ಹರಸಾಹಸಪಟ್ಟು ಆತನನ್ನು ಉಳಿಸಿದ್ದಾರೆ ಎಂದು ವರದಿಯಾಗಿದೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ