janadhvani

Kannada Online News Paper

ಫೈನಲ್ ಎಕ್ಸಿಟ್ ವೀಸಾವನ್ನು ರದ್ದು ಪಡಿಸಲು ಸಾಧ್ಯ- ಜವಾಝಾತ್

ಜಿದ್ದಾ: 70 ದಿನಗಳ ಹಿಂದೆ ಬಿಡುಗಡೆ ಮಾಡಿದ ಫೈನಲ್ ಎಕ್ಸಿಟ್ ವೀಸಾವನ್ನು ರದ್ದು ಪಡಿಸಲು ಸಾಧ್ಯವಿದೆ ಎಂದು ಸೌದಿ ಪಾಸ್ಪೋರ್ಟ್ ವಿಭಾಗ ಹೇಳಿದೆ. ಇಖಾಮಾದಲ್ಲಿ ಸಾಕಷ್ಟು ಕಾಲಾವಧಿ ಹೊಂದಿದ್ದರೆ ಮಾತ್ರ ಅಂತಿಮ ನಿರ್ಗಮನ ವೀಸಾವನ್ನು ರದ್ದುಗೊಳಿಸಬಹುದಾಗಿದ್ದು, ಸಾವಿರ ಸೌದಿ ರಿಯಾಲ್ ದಂಡ ಪಾವತಿಸಬೇಕಾಗುತ್ತದೆ.

ಅಂತಿಮ ನಿರ್ಗಮನದಲ್ಲಿ ಊರಿಗೆ ತೆರಳಲು ಲಗತ್ತಿಸಲಾದ ನಿರ್ಗಮನ ವೀಸಾ ಸ್ಟಾಂಪ್ ಅನ್ನು ರದ್ದುಪಡಿಸಬೇಕಾದರೆ ಕಾರ್ಮಿಕನ ಇಖಾಮಾದಲ್ಲಿ ಸಾಕಷ್ಟು ಕಾಲಾವಧಿ ಹೊಂದಿರಬೇಕು ಎಂದು ಪಾಸ್ ಪೋರ್ಟ್ ವಿಭಾಗದ ಅಧಿಕಾರಿಗಳು ಟ್ವಿಟರ್ ಸಂದೇಶದ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕೆಲಸವನ್ನು ಕೊನೆಗೊಳಿಸಿ ಸ್ವದೇಶಕ್ಕೆ ಮರಳಲು 70 ದಿನಗಳ ಹಿಂದೆ ಎಕ್ಸಿಟ್ ಪಡೆದ ವಿದೇಶಿಗೆ ಅದನ್ನು ರದ್ದುಗೊಳಿಸಿ ಸೌದಿಯಲ್ಲಿ ಮುಂದುವರಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಅಧಿಕಾರಿಗಳು ವಿವರಣೆ ನೀಡಿ ಈ ರೀತಿ ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com