janadhvani

Kannada Online News Paper

ದಮಾಂ: ದೇಶದ ವಾಣಿಜ್ಯ ಸಂಸ್ಥೆಗಳು ಮತ್ತಿತರ ಕಡೆ ಜಾರಿಗೆ ತರಲಾದ ಸ್ವದೇಶೀಕರಣದ ಬಗ್ಗೆ ಮತ್ತೊಮ್ಮೆ ವಿಮರ್ಶೆ ನಡೆಸಲಾಗುವುದು ಎಂದು ಕಾರ್ಮಿಕ, ಸಾಮಾಜಿಕ ಕ್ಷೇಮ ಖಾತೆಯ ಸಚಿವ ಇಂಜಿನಿಯರ್ ಅಹ್ಮದ್ ಸುಲೈಮಾನ್ ಅಲ್ ರಾಜಿಹ್ ವ್ಯಕ್ತಪಡಿಸಿದ್ದಾರೆ.

ಟೆಕ್ಸ್‌ಟೈಲ್, ಆಟೋಮೊಬೈಲ್, ವಾಹನ ಮಾರಾಟ, ಪಾತ್ರೆಗಳು, ಪೀಠೋಪಕರಣ, ಕಚೇರಿ, ಬೇಕರಿ ಉತ್ಪನ್ನಗಳು ಮತ್ತು ಮಿಠಾಯಿ ಅಂಗಡಿಗಳು ಸೇರಿದಂತೆ ಹನ್ನೆರಡು ವಲಯಗಳಲ್ಲಿ ಎಪ್ಪತ್ತು ಶೇಕಡಾ ಸ್ವದೇಶೀಕರಣವನ್ನು ಇತ್ತೀಚೆಗೆ ಜಾರಿಗೆ ತರಲಾಗಿತ್ತು.

ಆದರೆ ಪರಿಚಯಸ್ಥರಾದ ಮೂಲ ನಿವಾಸಿಗಳು ಲಭಿಸದ ಕಾರಣ ಅನೇಕ ಸಂಸ್ಥೆಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ಹಲವಾರು ಸ್ಥಾಪನೆಗಳ ಮಾಲಿಕರು ದೇಶೀಕರಣದ ಪ್ರಮಾಣವನ್ನು ಮರುಪರಿಶೀಲನೆ ನಡೆಸುವಂತೆ ಸಚಿವರೊಂದಿಗೆ ಕೇಳಿಕೊಂಡಿದ್ದರು.

ಪ್ರಮಾನವನ್ನು ಐವತ್ತು ಶೇಕಡಾ ಆಗಿ ನಿಗದಿಪಡಿಸುವಿರಾ ಎಂಬ ಪ್ರಶ್ನೆಗೆ ತಾವು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದವರು ಹೇಳಿದರು.
ಪ್ರತೀ ವಿಭಾಗದಲ್ಲಿ ಎಷ್ಟು ಕಡಿತಗೊಳಿಸಬೇಕು ಎಂಬುದನ್ನೂ ತೀರ್ಮಾನಿಸಲಾಗುವುದು. ಯಾವ ವಿಭಾಗ ಎಂಬುದನ್ನು ಈಗ ಹೇಳಲಾಗದು ಎಂದ ಸಚಿವರು, ಖಾಸಗಿ ವಲಯದ ಸ್ಥಾಪನೆಗಳ ಮಾಲಕರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದರು.

ಮಾರಾಟ ವಲಯದಲ್ಲಿ ಶೇಕಡಾ ಎಪ್ಪತ್ತು ಶೇಕಡಾ ದೇಶೀಕರಣವನ್ನು ಜಾರಿಗೆ ತಂದ ಕಾರಣ ಭಾರತೀಯರು ಸಮೇತ ಅನೇಕರು ತಮ್ಮ ಕೆಲಸವನ್ನು ಕಳಕೊಂಡಿದ್ದರು.

error: Content is protected !! Not allowed copy content from janadhvani.com