janadhvani

Kannada Online News Paper

ಮಕ್ಕಾ: ಶೇಕಡಾ ಮೂವತ್ತು ಮಂದಿ ಹಜ್ಜಾಜ್ ಗಳಿಗೆ ಮುಂದಿನ ಹಜ್ ಋತುವಿನಲ್ಲಿ ಆಹಾರ ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯದ ಕಾರ್ಯದರ್ಶಿ ಡಾ ಹುಸೈನ್ ಅಲ್ ಶರೀಫ್ ಹೇಳಿದ್ದಾರೆ.

ಅದೇ ವೇಳೆ 2020 ರ ಹೊತ್ತಿಗೆ ಹಜ್ಜಾಜ್ ಗಳ ಆಹಾರ ಸರಬರಾಜಿನಲ್ಲಿ 40% ನಷ್ಟು ನೀಡಲು ಸೌಕರ್ಯ ಮಾಡಲಾಗುವುದು ಎಂದ ಅವರು, ಬೇಯಿಸಿದ ಗುಣಮಟ್ಟದ ಆಹಾರವನ್ನು ಯಾತ್ರಿಕರಿಗೆ ವಿತರಿಸಲಾಗುವುದು ಎಂದರು.

ವಿವಿಧ ಕ್ಯಾಟರಿಂಗ್ ಕಂಪನಿಗಳು ಯಾತ್ರಾರ್ಥಿಗಳ ಆಹಾರ ವಿತರಣೆ ನಿರ್ವಹಣೆಗೆ ಸನ್ನದ್ಧರಾಗಿದ್ದಾರೆ. ಈ ವಲಯದಲ್ಲಿ 2020 ರಲ್ಲಿ 20 ಶತಕೋಟಿ ಸೌದಿ ರಿಯಾಲ್ ಮತ್ತು 2030 ರಲ್ಲಿ 47 ಬಿಲಿಯನ್ ಸೌದಿ ರಿಯಾಲ್ ಗಳನ್ನು ಕಂಪನಿಗಳಿಗೆ ಹೂಡಿಕೆ ಸಾಧ್ಯವಾಗಲಿದೆ. ಮಕ್ಕಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ಅಡಿಯಲ್ಲಿ ಸಂಘಟಿಸಿದ್ದ ಸಫ್ಝ (ಡೀಲ್) ಫಾರಂನ ಎರಡನೇ ಸಂಚಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಜ್ ಕ್ಯಾಟರಿಂಗ್ ಉಧ್ಯಮವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹುಸೈನ್ ಅಲ್ ಶರೀಫ್ ಹೇಳಿದ್ದಾರೆ. ಹಜ್ ಕ್ಯಾಟರಿಂಗ್ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ನಿರೀಕ್ಷೆಯನ್ನು ನೀಡುತ್ತಿದ್ದು, ಹಜ್ ಯಾತ್ರಾರ್ಥಿಗಳಿಗೆ ಆಹಾರ ಸರಬರಾಜಿಗಾಗಿ ಸಾರಿಗೆ ವ್ಯವಸ್ಥೆಯನ್ನು ಸುಲಭಗೊಳಿಸಲಾಗುತ್ತದೆ. ಉತ್ತಮ ಸೇವೆಯ ಮಾದರಿಯಲ್ಲಿ ವಾಹನ ಸೌಕರ್ಯವನ್ನು ಕಾರ್ಯಗತಗೊಳಿಸಲಾಗುತ್ತದೆ. ನಮ್ಮ ಮುಂದೆ ಇನ್ನೂ ಹಲವು ಆಯ್ಕೆಗಳು ಮತ್ತು ಯೋಜನೆಗಳಿವೆ ಎಂದು ಹುಸೈನ್ ಅಲ್-ಶರೀಫ್ ಹೇಳಿದರು.

error: Content is protected !! Not allowed copy content from janadhvani.com