ಮಂಗಳೂರು: ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜೂಬಿಲಿ ಘೋಷಣಾ ಸಮಾವೇಶ ಫೆಬ್ರುವರಿ 13 ರಂದು ಮಂಗಳೂರಿನಲ್ಲಿ ನಡೆಸುವುದಾಗಿ ಇವತ್ತು ಮಂಗಳೂರಿನ ಎಸ್ಇಡಿಸಿ ಸಭಾಂಗಣದಲ್ಲಿ ಮಜ್ಲಿಸುಲ್ ಉಲಮಾಯಿ ಸ್ಸಅದಿಯ್ಯೀನ್ ಕರ್ನಾಟಕ ಇದರ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭಯನ್ನು ಜಾಮಿಅ ಸಅದಿಯ್ಯ ಕಾರ್ಯದರ್ಶಿ ಕೆ ಪಿ ಹುಸೈನ್ ಸಅದಿ ಕೆಸಿರೋಡ್ ಉದ್ಘಾಟಿಸಿದರು. ಎಂ ಯು ಎಸ್ ರಾಜ್ಯಾಧ್ಯಕ್ಷ ಅಶ್ರಫ್ ಸಅದಿ ಮಲ್ಲೂರು ಅಧ್ಯಕ್ಷತೆ ವಹಿಸಿದ್ದರು.ಕೇಂದ್ರ ಸಮಿತಿ ಮಜ್ಲಿಸುಲ್ ಉಲಮಾಯಿ ಸ್ಸಅದಿಯ್ಯೀನ್ ನಾಯಕರಾದ ಅಬ್ದುಲ್ ಖಾದರ್ ಸಅದಿ ಕೊಲ್ಲಂಪಾಡಿ, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ಎಸ್ಸೆಸ್ಸೆಫ್ ರಾಜ್ಯ ನಾಯಕ ಹಾಫಿಳ್ ಯಾಕೂಬ್ ಸಅದಿ ನಾವೂರು ಎಂಯುಎಸ್ ಜಿಲ್ಲಾಧ್ಯಕ್ಷ ಯು. ಕೆ ಯೂಸುಫ್ ಸಅದಿ ವಳವೂರು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಉರುಮಣೆ ಇಬ್ರಾಹಿಮ್ ಸಅದಿ ಮಾಣಿ ಮುಂತಾದವರು ಉಪಸ್ಥಿತರಿದ್ದರು. ಸಯ್ಯಿದ್ ಝೈನುಲ್ ಆಬಿದ್ ಸಅದಿ ಕಿನ್ಯ ದುವಾ ನೇರವೇರಿಸಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ಇಸ್ಮಾಯಿಲ್ ಸಅದಿ ಉರುಮಣೆ ವಂದಿಸಿದರು