janadhvani

Kannada Online News Paper

ಎಸ್ ಜೆ ಎಂ ರಾಜ್ಯ ಮಟ್ಟದ ಟ್ರೈನರ್ಸ್ ಕೋಚಿಂಗ್ ತರಬೇತಿಗೆ ಪ್ರೌಢ ಸಮಾಪ್ತಿ

ದೇರಳಕಟ್ಟೆ: ಅಖಿಲ ಭಾರತ ಇಸ್ಲಾಮಿಕ್ ವಿಧ್ಯಾಬ್ಯಾಸ ಮಂಡಳಿ ಆಯೋಜಿಸಿದ ಮುಅಲ್ಲಿಂ ಸಬಲೀಕರಣ ಕಾರ್ಯಕ್ರಮ (MEP) ದ ಅಂಗವಾಗಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಕರ್ನಾಟಕ ರಾಜ್ಯದ ಆಯ್ದ ಹನ್ನೊಂದು ಟ್ರೈನರ್ಸ್ ಗಳು ಮತ್ತು ದೇರಳಕಟ್ಟೆ ರೇಂಜ್ ಮುಅಲ್ಲಿಮರಿಗೆ ನೀಡಲಾದ ಟ್ರೈನಿಂಗ್ ಮುಅಲ್ಲಿಮ್ ಎಂಪವರ್ ಮೆಂಟ್ ತರಬೇತಿ ಇಂದು ಸಮಾಪ್ತಿಗೊಂಡಿತು.

ಕೇಂದ್ರ ಸಮಿತಿಯ ಬಹು ನಿರೀಕ್ಷಿತ ಯೋಜನೆಯಲ್ಲೊಂದಾದ ನೂರು ತಾಸಿನ ತರಬೇತಿ ಕಾರ್ಯಕ್ರಮದ ಮೊದಲ ಹಂತದ ಐವತ್ತು ಗಂಟೆಯ ಈ ತರಬೇತಿಗೆ ಕೇಂದ್ರ ಸಮಿತಿ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಕುಂಞಂಕುಳಂ, ಬಶೀರ್ ಮುಸ್ಲಿಯಾರ್ ಚೆರೂಪ, ಮುಹ್ಯುದ್ದೀನ್ ಸಖಾಫಿ, ಬಶೀರ್ ಮಿಸ್ಬಾಹಿ ಮುಂಡಾಂಬ್ರ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ನೇತೃತ್ವ ನೀಡಿದರು.

ಮೂರು ಹಂತಗಳಾಗಿ ನಡೆದ ಈ ಕ್ಯಾಂಪಿನ ಅತಿಥೇಯ ವಹಿಸಿದ ಎಸ್ ಜೆ ಎಂ ದೇರಳಕಟ್ಟೆ ರೇಂಜ್ ನ ಉರುಮಣೆ, ಅಡ್ಕರೆ ಪಡ್ಪು, ಬದ್ಯಾರ್ ಮೊದಲಾದ ಕಡೆಗಳಲ್ಲಿ ನಡೆಯಿತು.

ಇಂದು ಬದ್ಯಾರ್ ನಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕಾರ್ಯಕ್ರಮದ ಪ್ರಮುಖ ರೂವಾರಿ ಎಸ್ ಜೆ ಎಂ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಉದ್ಘಾಟಿಸಿದರು. ಕ್ಯಾಂಪ್ ಅಮೀರ್ ಉರುಮಣೆ ಇಸ್ಮಾಯಿಲ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ಮೂಲಕ ರಾಜ್ಯ ಮಟ್ಟದ ಟ್ರೈನರ್ಸ್ ವಿಂಗ್ ಗೆ ಅಧಿಕೃತ ಚಾಲನೆ ನೀಡಲಾಯಿತು.
ಕೊನೆಯಲ್ಲಿ ನಾಯಕರನ್ನು ಕರ್ನಾಟಕ ಟ್ರೈನರ್ಸ್ ವಿಂಗ್ ಮತ್ತು ದೇರಳಕಟ್ಟೆ ರೇಂಜ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

error: Content is protected !! Not allowed copy content from janadhvani.com