ಬಂಟ್ವಾಳ :ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಇದರ ಪೆರಿಯಪಾದೆ ಶಾಖೆಯ ನೂತನ ಅಧ್ಯಕ್ಷರಾಗಿ ಅಕ್ರಂ ಪೆರಿಯಪಾದೆ ಆಯ್ಕೆಯಾದರು.
ಮಹಾಸಭೆ ಶಾಖಾಧ್ಯಕ್ಷ ಹಾರಿಸ್ ಪೆರಿಯಪಾದೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಅಕ್ರಂ ಪೆರಿಯಪಾದೆಯವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸೆಕ್ಟರ್ ನಾಯಕರಾದ ರಿಯಾಝ್ ಪಾದಿಲ ಹಾಗೂ ಸಂಶುದ್ದೀನ್ ಪಾದಿಲ ವೀಕ್ಷಕರಾಗಿ ಉಪಸ್ಥಿತರಿದ್ದರು.
ಶಾಖೆಯ ಮಾಜಿ ಅಧ್ಯಕ್ಷರಾದ ಝೈನುದ್ದೀನ್ ಸಅದಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.