ಬೆಂಗಳೂರು(ಜನಧ್ವನಿ ವಾರ್ತೆ): ಕಳೆದ ತಿಂಗಳಲ್ಲಿ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭೂಪಾತ, ನೆರೆ ಹಾಗೂ ಭೀಕರ ಪೃಕೃತಿ ದುರಂತ ಗಳು ಸಂಭವಿಸಿದಾಗ ಜೋಡಪಾಲ- ಮದೆನಾಡು ಪ್ರದೇಶಗಳಲ್ಲಿ ಮನೆ, ಭೂಮಿ ಹಾಗೂ ಪ್ರಾಣ ಕಳಕೊಂಡವರ ರಕ್ಷಣೆಗೆ ಅತಿ ಸಾಹಸಿಕವಾಗಿ ತನ್ನನ್ನು ತೊಡಗಿಸಿಕೊಂಡು ಅನೇಕ ಜನರ ಪ್ರಾಣ ಕಾಪಾಡಿದ್ದು ಅಲ್ಲದೆ ಇದೀಗ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ಸುಂಟಿಕೊಪ್ಪದಲ್ಲಿ ಒಂದು ಏಕರೆ ಜಾಗವನ್ನೂ ಇತ್ತೀಚೆಗೆ ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಮೂಲಕ ದಾನ ನೀಡಿದ
ಸಮಾಜ ಸೇವಕ , ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ.ಲತೀಫ್ ಸುಂಟಿಕೊಪ್ಪ ಅವರ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅವರಿಗೆ “ಕೊಡಗಿನ ರತ್ನ” (Jewel of coorg) ಪ್ರಶಸ್ತಿ ನೀಡಿ ಗೌರವಿಸಲಾಯಿತು
ಬೆಂಗಳೂರು ಬೆನ್ಸನ್ ಟೌನ್ ನಲ್ಲಿ ನಡೆದ ಸಮಾರಂಭದಲ್ಲಿ ದ.ಕ.ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಲತೀಫ್ ಅವರಿಗೆ ಶಾಲು ಹೊದಿಸಿದರು. ಕರ್ನಾಟಕ ಹಜ್ ಮತ್ತು ವಖ್ಫ್ ಇಲಾಖೆ ಸಚಿವ ಝಮೀರ್ ಅಹ್ಮದ್ ಪ್ರಶಸ್ತಿ ಫಲಕ ನೀಡಿದರು.. ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಅಧ್ಯಕ್ಷ ಅಲ್ ಹಾಜ್ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು
ಒಬ್ಬ ಯಶಸ್ವಿ ಉದ್ಯಮಿಯಾಗಿರುವ ಲತೀಫ್ ಸುನ್ನೀ ಯುವಜನ ಸಂಘದ ಸಕ್ರಿಯ ಕಾರ್ಯ ಕರ್ತನಾಗಿ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕೊಡಗು ಜಿಲ್ಲಾಧ್ಯಕ್ಷರಾಗಿ, ಕೊಡಗು ಜಿಲ್ಲೆಯ ವಖ್ಫ್ ಸಲಹಾ ಮಂಡಳಿಯ ಉಪಾಧ್ಯಕ್ಷ ರಾಗಿ ಸುಂಟಿಕೊಪ್ಪ ಟೌನ್ ಮುಸ್ಲಿಂ ಜಮಾಅತ್ ಅಧ್ಯಕ್ಷ ರಾಗಿ ಸುಂಟಿಕೊಪ್ಪ ಇಹ್ಸಾನಿಯ್ಯ ಅಕಾಡೆಮಿಯ ಕೋಶಾಧಿಕಾರಿ ಯಾಗಿ ಹಲವಾರು ಧಾರ್ಮಿಕ.ಸಾಮಾಜಿಕ, ರಾಜಕೀಯ ರಂಗಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ
ಸನ್ಮಾನ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಮಾಣಿ ಉಸ್ತಾದ್, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಯೇನೆಪೋಯ ಯುನಿವರ್ಸಿಟಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ,ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ, ವಖಫ್ ಮಂಡಳಿ ಮಾಜಿ ನಿರ್ದೇಶಕ ಶಾಫಿ ಸಅದಿ ಬೆಂಗಳೂರು, ಸುನ್ನೀ ಕೋ ಅರ್ಡಿನೇಶನ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಎಸ್ ವೈ ಎಸ್ ನಾಯಕರಾದ ಯಾಕೂಬ್ ಯೂಸುಫ್ ಬೆಂಗಳೂರು, ಅಶ್ರಫ್ ಕಿನಾರಾ, ಹನೀಫ್ ಹಾಜಿ ಉಳ್ಳಾಲ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೇರಳ ರಾಜ್ಯ ಎಸ್. ವೈ.ಎಸ್.ಉಪಾಧ್ಯಕ್ಷ ಪಳ್ಳಂಗೊಡ್ ಅಬ್ದುಲ್ ಖಾದರ್ ಮದನಿ, ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ಇಸ್ಮಾಯಿಲ್ ಸಅದಿ ಕಿನ್ಯ, ದ.ಕ.ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ ಎನ್.ಎಸ್. ಕರೀಂ ಮಂಜನಾಡಿ, ಎಂ.ಬಿ.ಹಮೀದ್ ಮಡಿಕೇರಿ, ಹಬೀಬ್ ನಾಳ , ಇಬ್ರಾಹಿಂ ಸುಂಟಿಕೊಪ್ಪ, ಮುಂತಾದವರು ಭಾಗವಹಿಸಿದರು
ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಕ್ರಮ ನಿರ್ವಹಿಸಿದರು.