janadhvani

Kannada Online News Paper

‘ಅಚ್ಚೆದಿನ್’ ಬೊಗಸ್ ಆಶ್ವಾಸನೆ ನೀಡಿ ವಂಚಿಸಿದ ಪ್ರಧಾನಿ -ರಾಹುಲ್ ಗಾಂಧಿ

ನವದೆಹಲಿ,ಆ.7: ಭ್ರಷ್ಟಾಚಾರ, ಆರ್ಥಿಕ ವಿಫಲತೆ, ಸಮಾಜ ಇಬ್ಭಾಗಗಳು ಈ ಸರ್ಕಾರದಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಕಟುವಾಗಿ ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅವರು ಸಂಸತ್ ಭವನದಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ (ಸಿಪಿಪಿ) ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ದೇಶದ ಜನರಿಗೆ ಅಚ್ಚೆ ದಿನ್ ಎಂಬ ಬೊಗಸ್ ಆಶ್ವಾಸನೆ ನೀಡಿ ವಂಚಿಸಿದ್ದಾರೆ. ಇದರ ವಿರುದ್ಧ ಪರ್ಯಾಯ ಕ್ರಮವನ್ನು ಅನುಸರಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಪಕ್ಷದ ಸಂಸದರಿಗೆ ಕರೆ ನೀಡಿದರು.

ಬಿಜೆಪಿ ಸರ್ಕಾರದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆ, ಆತಂಕದ ವಾತಾವರಣ ತಾಂಡವವಾಡುತ್ತಿದೆ. ಜನರು ಮೋದಿ ಆಡಳಿತದಿಂದ ಭ್ರಮನಿರಸನಗೊಂಡಿದ್ದು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಅಂತ್ಯಗೊಳಿಸಿ ಪರ್ಯಾಯ ಉತ್ತಮ ಸರ್ಕಾರ ರಚನೆಯಾಗಬೇಕೆಂಬುದು ಜನರ ಬಯಕೆಯಾಗಿದೆ. ಇದನ್ನು ಸಾಕಾರಗೊಳಿಸಲು ಸಂಸದರು ಶ್ರಮಿಸಬೇಕು ಎಂದು ರಾಹುಲ್ ಕರೆ ನೀಡಿದರು. ಇಂದು ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇದನ್ನು ನಾವು ಅರಿತುಕೊಂಡು ಜನರಿಗೆ ಉತ್ತಮ ಸರ್ಕಾರ ನೀಡುವತ್ತ ಕಾರ್ಯೋನ್ಮುಖವಾಗಬೇಕು. ಈಗ ಪ್ರಜಾಪ್ರಭುತ್ವ ಪರ ಪಕ್ಷ ಮತ್ತು ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದರು.

error: Content is protected !! Not allowed copy content from janadhvani.com