ಮಂಗಳೂರು: ಪೈಲಟ್ಗೆ ಧೀಡೀರ್ ಎಂದು ಆನಾರೋಗ್ಯದ ಸಮಸ್ಯೆ ಕಾಡಿದ್ದರಿಂದಾಗಿ ಟೇಕ್ ಆಫ್ ಆಗಲು ಅಣಿಯಾಗಿದ್ದ ವಿಮಾನೊಂದು ರನ್ವೇಯಲ್ಲೇ ನಿಂತಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ 12.45 ಕ್ಕೆ ಸ್ಪೈಸ್ ಜೆಟ್ SG-59 ವಿಮಾನ ದುಬೈಗೆ ತೆರಳಬೇಕಿತ್ತು. ವಿಮಾನ ಟೇಕ್ ಆಫ್ ಆಗಲು ಸಿದ್ಧತೆ ನಡೆಸಿತ್ತು. ಆದರೆ ಈ ಸಂದರ್ಭದಲ್ಲಿ ಪೈಲಟ್ಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ವಿಮಾನ ರನ್ವೇಯಲ್ಲೇ ನಿಂತಿದ್ದು, ವಿಮಾನದಲ್ಲಿ 188 ಪ್ರಯಾಣಿಕರಿದ್ದು,ರಾತ್ರಿಯಿಂದ ವಿಮಾನದಲ್ಲೇ ಕಾಯುತ್ತಿದ್ದರೂ ಬೆಳಗ್ಗಿನ ವರೆಗೂ ಬದಲಿ ಪೈಲಟ್ ವ್ಯವಸ್ಥೆ ಮಾಡಿಲ್ಲವೆಂದು ಪ್ರಯಾಣಿಕರು ವಿಮಾನ ಸಂಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.