janadhvani

Kannada Online News Paper

ವಾಣಿಜ್ಯ ಕ್ಷೇತ್ರಗಳ ನೌಕರರು ಗೃಹ ಕೆಲಸಕ್ಕೆ ಬದಲಾಯಿಸುವಂತಿಲ್ಲ

ರಿಯಾದ್ :ಸೌದಿ ಉದ್ಯೋಗ ಮತ್ತು ಸಮಾಜ ಕಲ್ಯಾಣ ಸಚಿವಾಲಯವು, ಗೃಹ ವಲಯಕ್ಕೆ ಕೆಲಸವನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಚಾಲಕ,ಮನೆ ಕೆಲಸ, ಅಡುಗೆ, ಆರೈಕೆ ಮಾಡುವವರು ಮುಂತಾದ ಗೃಹ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದಿಲ್ಲ.

ಸೆಪ್ಟೆಂಬರ್ 12 ರಿಂದ ಖಾಸಗಿ ವಲಯದಲ್ಲಿನ ವಿದೇಶೀ ಕೆಲಸಗಾರರಿಗೆ ಕೆಲಸ ಬದಲಾಯಿಸುವ ಅನುಮತಿ ನೀಡಲಿದೆ ಎಂದು ಸಚಿವಾಲಯ ಇತ್ತೀಚೆಗೆ ಘೋಷಿಸಿದ್ದವು. ಅದಕ್ಕೆ ಅನುಗುಣವಾಗಿ ಸಚಿವಾಲಯದ ವಿವರಣೆಯು ಹೊರಬಿದ್ದಿದ್ದು, ವೈದ್ಯರು, ಇಂಜಿನಿಯರ್ ಮತ್ತು ಅಕೌಂಟೆಂಟ್ ‌ಗಳ ಪೋಸ್ಟ್ ಗಳನ್ನು ಬದಲಿಸಲು ಸಂಬಂಧಪಟ್ಟ ಕೌನ್ಸಿಲ್‌ನ ಪ್ರಮಾಣಪತ್ರವನ್ನೂ ಒಳಗೊಂಡಂತೆ ಕಾರ್ಮಿಕ ಕಚೇರಿಯನ್ನು ಸಂಪರ್ಕಿಸಬೇಕಾಗಿದೆ.

ಆಯಾ ಕ್ಷೇತ್ರಗಳಲ್ಲಿ ಪರಿಣತಿ, ಅನುಭವವನ್ನು ಹೊಂದಿರುವವರಿಗೆ ಮಾತ್ರ ಇಲಾಖೆಯಿಂದ ಅಭ್ಯಾಸ ಸರ್ಟಿಫಿಕೇಟ್ ಲಭಿಸುತ್ತದೆ.ಈ ಪ್ರಮಾಣಪತ್ರವನ್ನು ಹೊಂದಿಲ್ಲದವರ ಅರ್ಜಿಯನ್ನು  ತಿರಸ್ಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಆದಾಗ್ಯೂ, ಇತರ ಪೋಸ್ಟ್ ಗೆ ಬದಲಾಯಿಸಲು ಬಯಸುವವರು ಆಯಾ ಸಂಸ್ಥೆಗಳ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

error: Content is protected !! Not allowed copy content from janadhvani.com