janadhvani

Kannada Online News Paper

ಯುಎಇ: ಸಾರ್ವಜನಿಕ ಕ್ಷಮಾಪಣೆ ಕೇಂದ್ರಕ್ಕೆ ಭೇಟಿ ನೀಡಿ- ಭಯ ಬೇಡ

ದುಬೈ: ಅನಧಿಕೃತವಾಗಿ ವಾಸವಿರುವ ಯಾರೇ ಆದರೂ ಯಾವುದೇ ಭಯವಿಲ್ಲದೆ ಅವೀರ್ ಸಾರ್ವಜನಿಕ ಕ್ಷಮಾಪಣಾ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಸಂಬಂಧಿಸಿದ ಖಾತೆಯ ಡೈರೆಕ್ಟರ್ ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ವ್ಯಕ್ತಪಡಿಸಿದ್ದಾರೆ.ತಮ್ಮ ದಾಖಲೆಗಳನ್ನು ಸರಿಪಡಿಸಲು ಅವೀರ್‌ನ ಕೇಂದ್ರಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ತಾಯಿನಾಡಿಗೆ ಮರಳಲು ಬಯಸುವವರಿಗೆ ನಾವು ಸಹಾಯ ಮಾಡುತ್ತೇವೆ. ನಿಮ್ಮ ಪಾಸ್ಪೋರ್ಟ್ ಪ್ರಾಯೋಜಕರ ಕೈಯ್ಯಲ್ಲಿದ್ದರೆ, ಪ್ರಾಯೋಜಕರನ್ನು ಸಾರ್ವಜನಿಕ ಕ್ಷಮಾಪಣೆ ಕೇಂದ್ರಕ್ಕೆ ಕರೆಯಲಾಗುವುದು.

ಅರ್ಜಿದಾರರು ಅಪರಾಧವನ್ನು ಎಸಗಿದ್ದರೆ ಮಾತ್ರ ಸಮಸ್ಯೆ ಇದೆ. ಕಾರ್ಯವಿಧಾನಗಳನ್ನು ಅಪರಾಧಿಗಳು ಮತ್ತು ಕಾನೂನುಬಾಹಿರ ನಿವಾಸಿಗಳು ಎಂಬುದಾಗಿ ವರ್ಗೀಕರಿಸಲಾಗಿದೆ.

ಪಾಸ್ಪೋರ್ಟ್ ಇಲ್ಲದವರು ರಾಜತಾಂತ್ರಿಕ ಕಚೇರಿಗಳಿಂದ ಔಟ್ ಪಾಸ್ ಪಡೆಯಬೇಕಾಗುತ್ತದೆ.

ದೇಶಕ್ಕೆ ಹಿಂದಿರುಗಿದವರು ಪ್ರಯಾಣ ದಾಖಲೆಗಳೊಂದಿಗೆ ಯುಎಇಗೆ ಪ್ರಯಾಣಿಸಲು ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಯಾವುದೇ ದಂಡ ವಿಧಿಸಲಾಗುವುದೂ ಇಲ್ಲ. ಕೆಲವು ಅಸಾಮಾನ್ಯ ಪ್ರಕರಣಗಳನ್ನು ಕಾರ್ಮಿಕ ಇಲಾಖೆಗೆ ಕಳುಹಿಸಲಾಗುತ್ತದೆ. ಅವರು ಅಂತಿಮ ತೀರ್ಪು ನೀಡಲಿದ್ದಾರೆ.ಕೆಲವೊಮ್ಮೆ ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ವಸತಿ ಇಲಾಖೆಯಲ್ಲಿ ಅದಕ್ಕೊಂದು ವಿಭಾಗವಿದೆ.

ಕೆಲವು ಸಂದರ್ಭಗಳಲ್ಲಿ ಅಭ್ಯರ್ಥಿಗಳ ಗೌಪ್ಯತೆಯನ್ನು ಗೌರವಿಸಬೇಕಾಗುತ್ತದೆ. ಆ ಕಡೆಗೂ ಹೆಚ್ಚು ಗಮನ ಹರಿಸಲಾಗುವುದು.

ಎಲ್ಲರಿಗೂ ಸೂಕ್ತವಾದ ದೇಶವಾಗಿ ಯುಎಇ ನೆಲೆ ನಿಲ್ಲಬೇಕು. ಪ್ರತಿಯೊಬ್ಬರೂ ಸಂತೋಷವಾಗಿರಬೇಕು.
ಅವೀರ್‌ನಲ್ಲಿರುವ ಸಾರ್ವಜನಿಕ ಕೇಂದ್ರಕ್ಕೆ ಪ್ರತ್ಯೇಕ ಬಸ್ ಸರ್ವೀಸ್ ನಡೆಸಲು ಆರ್ಟಿಎಗೆ ವಿನಂತಿಸಲಾಗಿದೆ.

ಸಾರ್ವಜನಿಕ ಕ್ಷಮಾಪಣಾ ಕೇಂದ್ರದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮೇಜರ್ ಜನರಲ್ ಹೇಳಿದರು. ಆಗಸ್ಟ್ 1 ರಿಂದ ಅಕ್ಟೋಬರ್ 31 ರವರೆಗೆ ಸಾರ್ವಜನಿಕ ಕ್ಷಮಾಪಣೆ ಮುಂದುವರಿಯಲಿದೆ.

error: Content is protected !! Not allowed copy content from janadhvani.com