janadhvani

Kannada Online News Paper

ಸೌದಿ ಶಾಪಿಂಗ್ ಮಾಲ್ ಗಳಲ್ಲಿ ದೇಶೀಕರಣ: ಮೂರು ಪ್ರಾಂತ್ಯಗಳಿಗೆ ವಿಸ್ತರಣೆ

ರಿಯಾದ್: ಸೌದಿ ಶಾಪಿಂಗ್ ಮಾಲ್ ಗಳಲ್ಲಿ ಸಂಪೂರ್ಣ ದೇಶೀಕರಣವನ್ನು ಮೂರು ಪ್ರಾಂತ್ಯಗಳಿಗೂ ವಿಸ್ತರಿಸಲಾಗುತ್ತದೆ.
ವಿವಿಧ ಪೋಸ್ಟ್ ಗಳಲ್ಲಿ ಮಾಲ್ ಗಳಲ್ಲಿ ಕೆಲಸ ಮಾಡುವ ಭಾರತೀಯರನ್ನೂ ಒಳಗೊಂಡಂತೆ ಅನಿವಾಸಿಗಳಲ್ಲಿ ಇದು ಕಳವಳ ಉಂಟುಮಾಡಿದೆ.
ರಿಯಾದ್, ಮಕ್ಕಾ ಮತ್ತು ಪೂರ್ವ ಪ್ರಾಂತ್ಯಗಳ ಮಾಲ್ ಗಳಲ್ಲಿ ಈ ವಿದ್ಯಾಮಾನ ಕಂಡು ಬರಲಿದೆ.

ಸ್ವಚ್ಛಗೊಳಿಸುವ ಕೆಲಸವನ್ನು ಹೊರತುಪಡಿಸಿ ಎಲ್ಲಾ ಪೋಸ್ಟ್ ಗಳಲ್ಲಿ ಇನ್ನು ಮುಂದೆ ಸ್ವದೇಶಿ ಗಳು ಕಾರ್ಯನಿರ್ವಹಿಸಲಿದ್ದಾರೆ. ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯವು ಈ ಬಗೆಗಿನ ಸಿದ್ದತೆ ನಡೆಸಿರುವುದಾಗಿ ಪ್ರಾಂತೀಯ ಇಲಾಖೆಯ ಮುಖ್ಯಸ್ಥ ಸ‌ಅದಾ ಅಲ್ ಗಂದಿ ಹೇಳಿದ್ದಾರೆ.ಈ ಹಿಂದೆ ಒಂಬತ್ತು ಕ್ಷೇತ್ರಗಳಲ್ಲಿ ಜಯಗಳಿಸಿದ ನಂತರ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರಾಂತೀಯ ಗವರ್ನರೇಟ್‌ಗಳು ಸ್ವದೇಶೀಕರಣಕ್ಕೆ ಸಾರಥ್ಯ ವಹಿಸಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಅಲ್-ಖಸೀಮ್ ಪ್ರಾಂತ್ಯದ ಮಾಲ್ ಗಳಲ್ಲಿ 100 ಶೇಕಡಾ ದೇಶೀಕರಣವನ್ನು ಪ್ರಥಮವಾಗಿ ಜಾರಿಗೊಳಿಸಲಾಗಿತ್ತು.ಇದಕ್ಕೆ ಮುಂಚಿತವಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿಯ ಸಹಕಾರದೊಂದಿಗೆ ನಾಗರಿಕರಿಗೆ ತರಬೇತಿ ಮತ್ತು ಸಾಲವನ್ನು ಒದಗಿಸಲಾಗಿತ್ತು.

ದೇಶೀಕರಣವು ಶಕ್ತಿಯುತವಾಗಿ ಜಾರಿಯಾಗುವುದರಿಂದಾಗಿ ತಮ್ಮ ಕೆಲಸವನ್ನು ಕಳೆದುಕೊಳ್ಳುವ ವಿದೇಶಿಗರು ಹಿಂತಿರುಗುವ ಅನಿವಾರ್ಯತೆಗೆ ಸಿಲುಕಿದ್ದಾರೆ.ಮಾರಾಟಗಾರ, ವಹಿವಾಟು ಉಸ್ತುವಾರಿ, ಅಕೌಂಟೆಂಟ್, ಮ್ಯಾನೇಜರ್ ಇತ್ಯಾದಿ ಹುದ್ದೆಗಳಲ್ಲಿ ವಿವಿಧ ಮಾಲ್ ಗಳಲ್ಲಿ ಕೆಲಸ ಮಾಡುವ ಹಲವಾರು ವಿದೇಶಿಯರಿದ್ದಾರೆ.ಇತರ ಪ್ರದೇಶಗಳಲ್ಲಿ, ಪಟ್ಟಿಗಳಲ್ಲಿಲ್ಲದ ಯಾವುದೇ ಪೋಸ್ಟ್ ಗೆ ಸೇರುವುದೂ ಅವರಿಗೆ ಕಷ್ಟ ಸಾಧ್ಯವಾಗಿದೆ.

error: Content is protected !! Not allowed copy content from janadhvani.com