ದುಬೈ: ಯುಎಇ ಮತ್ತು ಇತರ ಕೊಲ್ಲಿ ರಾಷ್ಟ್ರಗಳಲ್ಲಿ “ಗಡೀಪಾರು ಮಾಡುವ” ವಂಚನೆಯ ಗುಂಪುಗಳು ತಲೆ ಎತ್ತುತ್ತಿದೆ.ಹಣವನ್ನು ಕಳೆದುಕೊಂಡಿರುವ ಕೆಲವರು ಸಾರ್ವಜನಿಕ ಪ್ರತಿಭಟನೆಗೆ ಇಳಿದ ಕಾರಣ ಇದು ಬೆಳಕಿಗೆ ಬಂದಿದೆ. ಈ ವಂಚಕರು ಭಾರತೀಯರನ್ನು ಗುರಿಪಡಿಸುತ್ತಿದ್ದಾರೆ ಎನ್ನಲಾಗಿದೆ.
ವಲಸೆ ಅಧಿಕಾರಿಗಳು ಎಂಬುದಾಗಿ ಫೋನ್ ಕರೆಗಳು ಬರುತ್ತವೆ. ಸಮಸ್ಯೆಗಳನ್ನು ತಪ್ಪಿಸಲು ಹಣ ಕೇಳುವುದು ಅವರ ಮುಖ್ಯ ರೀತಿಯಾಗಿದೆ. ಇತ್ತೀಚೆಗೆ ಭಾರತೀಯ ಮಹಿಳೆಯೊಬ್ಬರು 1,300 ದಿರ್ಹಂ ಕಳೆದುಕೊಂಡರು. ಒಂದು ಗಂಟೆಯ ಕಾಲ ಈ ಮಹಿಳೆಯೊಂದಿಗೆ ವಂಚಕರು ಫೋನ್ ಮೂಲಕ ಮಾತನಾಡಿದ್ದರು. ಮೂರು ಅಥವಾ ನಾಲ್ಕು ಜನರು ತನ್ನೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳುತ್ತಾರೆ.
ತಮ್ಮ ಕಡತದಲ್ಲಿ ಕೆಲವು ಪೇಪರ್ಗಳು ಕಾಣುವುದಿಲ್ಲ ಮತ್ತು ನಿಮ್ಮನ್ನು ತಕ್ಷಣ ಗಡೀಪಾರು ಮಾಡಲು ಆದೇಶವಿದೆ ಎಂದು ಅವರು ಹೇಳಿದರು.ಯಾವುದೇ ಸಂದೇಹ ಉಂಟಾಗದ ರೀತಿಯಲ್ಲಿ ಅವರು ಮಾತನಾಡಿದ್ದರು. ಕರೆ ಸಂಜೆ 3:40 ಕ್ಕೆ ಬಂದಿತು. ವೀಸಾ ಸಮಸ್ಯೆಗಳಿಗೆ ಸಂಬಂಧಿಸಿದ ದುಬೈನ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಮತ್ತು ವಿದೇಶಿ ವ್ಯವಹಾರಗಳ ಟೋಲ್ ಫ್ರೀ ಸಂಖ್ಯೆ 800511 ನಿಂದ ಈ ಕರೆ ಬಂದಿತ್ತು.ಫೋನ್ ಕರೆ ಮಾಡಲು ವಂಚನೆದಾರರು ಈ ರೀತಿಯ ಕೃತ್ರಿಮ ವಿಧಾನವನ್ನು ಬಳಸುತ್ತಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇಮಿಗ್ರೇಶನ್ ಕಾನೂನು ಪಟ್ಟಿಯ ಕಲಂ 18 ರ ಅಡಿಯಲ್ಲಿ ಕಪ್ಪುಪಟ್ಟಿಯಲ್ಲಿ ನೀವು ಇದ್ದೀರಿ ಇಲ್ಲಿಂದ ನಿಮ್ಮನ್ನು ಗಡಿಪಾರು ಮಾಡಲಾಗುವುದು. ದೆಹಲಿಗೆ ತಲುಪಿದಾಗ ಅದೇ ಕಾಯಿದೆಯ ಕಲಂ 20 ರ ಅಡಿಯಲ್ಲಿ ಬಂಧಿಸಲ್ಪಡುತ್ತೀರಿ ಎಂದು ಹೇಳಿದಾಗ, ಅವರು ಆಘಾತದಿಂದ ಪರಿಹಾರವನ್ನು ಕೇಳಿದರು.
ಭಾರತದಲ್ಲಿ ವಕೀಲರಿಂದ ಅಗತ್ಯವಾದ ದಾಖಲೆಗಳನ್ನು ತಕ್ಷಣ ಮಾಡಿಸುವುದು ಮಾತ್ರ ಏಕೈಕ ಪರಿಹಾರ ಆ ಕಾರ್ಯಕ್ಕಾಗಿ 1800 ದಿರ್ಹಂ ಅನ್ನು ತಕ್ಷಣ ಜಮಾ ಮಾಡಲು ಹೇಳಿದರು.ನಂತರ ವೆಸ್ಟರ್ನ್ ಯೂನಿಯನ್ ಮೂಲಕ ಹಣ ವರ್ಗಾಯಿಸಲಾಯಿತು. ಇದು ಐದು ನಿಮಿಷಗಳಲ್ಲಿ ಹಿಂಪಡೆಯಲಾಯಿತು. ಅನೇಕ ಜನರು ಇದೇ ರೀತಿಯ ಹಗರಣಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾವಿರಾರು ದಿರ್ಹಂ ಕಳೆದುಕೊಂಡವರೂ ಇದ್ದಾರೆ.
ಭಾರತೀಯ ದೂತಾವಾಸ ಅಧಿಕಾರಿಗಳು ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹೇಳಿದ್ದಾರೆ.ಇಂತಹ ದೂರುಗಳು ಮುಂಚೆಯೂ ಲಭಿಸಿದೆ.ಭಾರತೀಯ ದೂತಾವಾಸವು ಜನರನ್ನು ನೇರವಾಗಿ ಕರೆದು ಅಂತಹ ದಾಖಲೆಗಳನ್ನು ಕೇಳುವುದಿಲ್ಲ. ಹಾಗೇನಾದರೂ ನೀಡುವುದಿದ್ದಲ್ಲಿ ಊರಿನ ಶಾಶ್ವತ ವಿಲಾಸಕ್ಕೆ ಸೂಚನೆ ನೀಡುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ.