janadhvani

Kannada Online News Paper

ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್

ಅವರು ಜಾಮಿಅ ಮರ್ಕಝ್ ಮತ್ತು ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷರಾಗಿಯೂ, ಹಲವಾರು ಮಹಲ್ಲುಗಳ ಖಾಝಿಯಾಗಿಯೂ ಸೇವೆ ಸಲ್ಲಿಸಿದ್ದರು.

ಕೋಝಿಕ್ಕೋಡ್: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷರೂ, ಮರ್ಕಝ್ ಅಧ್ಯಕ್ಷರೂ ಆಗಿದ್ದ ಸಯ್ಯಿದ್ ಅಲಿ ಬಾಫಖಿ ತಙ್ಙಳ್ ವಫಾತಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅವರು ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷರಾಗಿಯೂ, ಹಲವಾರು ಮಹಲ್ಲುಗಳ ಖಾಝಿಯಾಗಿಯೂ ಸೇವೆ ಸಲ್ಲಿಸಿದ್ದರು.
1938ರಲ್ಲಿ ಕೊಯಿಲಾಂಡಿಯಲ್ಲಿ ಸಯ್ಯಿದ್ ಅಹ್ಮದ್ ಬಾಫಖಿ ಹಾಗೂ ಸಯ್ಯಿದತ್ ನಫೀಸ ಬೀವಿ ದಂಪತಿಯ ಪುತ್ರನಾಗಿ ಜನಿಸಿದ್ದರು.
ಅವರು ಕೊಯಿಲಾಂಡಿಯ ಮುಬಾರಕ್ ರಸ್ತೆಯಲ್ಲಿರುವ ವಲಿಯಕತ್ ಬಂಗ್ಲಾದಲ್ಲಿ ವಾಸವಾಗಿದ್ದರು.
1978ರಿಂದ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಖಜಾಂಜಿ ಹಾಗೂ ಜಾಮಿಅ ನೂರಿಯ್ಯ ಹಳೆಯ ವಿದ್ಯಾರ್ಥಿಗಳ ಸಂಘಟನೆಯಾದ ಫೈಝೀಸ್‌ನ ಅಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.
ತಳಿಪರಂಬ್ ಖುವ್ವತುಲ್ ಇಸ್ಲಾಂ, ಕೋಝಿಕ್ಕೋಡ್ ವಲಿಯಂಗಾಡಿ ಪಾಂಡಿಕಶಾಲ, ಕೊಯಿಲಾಂಡಿ, ಪರಪ್ಪನಂಗಾಡಿ ಪನಯತ್ತಿಲ್ ಹಾಗೂ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು.
ಅವರ ಪ್ರಮುಖ ಗುರುಗಳಲ್ಲಿ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮಾಟೂಲ್, ಇ.ಕೆ. ಹಸನ್ ಮುಸ್ಲಿಯಾರ್, ಹಾಫಿಳ್ ಮುಹಮ್ಮದ್ ಮುಸ್ಲಿಯಾರ್ ಬೇಪೂರ್, ಸಿ.ಎಂ. ವಲಿಯುಲ್ಲಾಹಿ, ಕೋಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಮೊದಲಾದವರು ಸೇರಿದ್ದಾರೆ.
ಪಾಣಕ್ಕಾಡ್ ಹುಸೈನ್ ಶಿಹಾಬ್ ಆಟಕ್ಕೋಯ ತಂಙಳ್, ಶಿರಿಯ ಅಲಿಕುಂಞಿ ಮುಸ್ಲಿಯಾರ್, ಸಯ್ಯಿದ್ ಝೈನುಲ್ ಆಬಿದೀನ್ ಬಾಫಖಿ ಮತ್ತು ಅಬ್ದುಲ್ ಖಾದಿರ್ ಬಾಫಖಿ ತಂಙಳ್ ಅವರ ಸಹಪಾಠಿಗಳಾಗಿದ್ದರು.
ಅಜ್ಮೀರ್ ಖಾಜಾ ಮುಈನುದ್ದೀನ್ ಚಿಶ್ತಿ ತಂಙಳ್ ಅವರ ಹೆಸರಿನಲ್ಲಿ ಜಾಮಿಅ ಮುಈನಿಯ್ಯ ಅಜ್ಮೀರ್ ಶರೀಫ್ ನೀಡುವ ಎರಡನೇ ಸುಲ್ತಾನುಲ್ ಹಿಂದ್ ಪ್ರಶಸ್ತಿ ಅವರಿಗೆ ಲಭಿಸಿತ್ತು.

ಇದನ್ನೂ ಓದಿರಿ...