ದುಬೈ: ಯುಎಇಯಲ್ಲಿರುವ ಭಾರತೀಯ ಪಾಸ್ಪೋರ್ಟ್ ಮತ್ತು ವೀಸಾ ಸೇವಾ ಕೇಂದ್ರಗಳ ಪೈಕಿ ನಾಲ್ಕು ಕೇಂದ್ರಗಳು ಇಂದಿನಿಂದ ಕಾರ್ಯನಿರ್ವಹಿಸುವುದಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಮುಝಫ್ಫಾ, ಅಲ್ ರೀಮ್, ದುಬೈ ಇನ್ವೆಸ್ಟ್ಮೆಂಟ್ ಪಾರ್ಕ್-1 ಮತ್ತು ಶಾರ್ಜಾ ಅಲ್ ಮಜಾಝ್ನಲ್ಲಿರುವ ಸೇವಾ ಕೇಂದ್ರಗಳು ಇಂದಿನಿಂದ ಕಾರ್ಯನಿರ್ವಹಿಸುವುದಿಲ್ಲ. ಈ ಕುರಿತು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಯುಎಇಯಲ್ಲಿ ಒಟ್ಟು 16 ಪಾಸ್ಪೋರ್ಟ್ ಮತ್ತು ವೀಸಾ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ನಾಲ್ಕು ಕೇಂದ್ರಗಳ ಸೇವೆ ಸ್ಥಗಿತಗೊಂಡಿರುವುದರಿಂದ ಈಗ ಕೇಂದ್ರಗಳ ಸಂಖ್ಯೆ 12ಕ್ಕೆ ಇಳಿಕೆಯಾಗಿದೆ. ಆಡಳಿತಾತ್ಮಕ ಕಾರಣಗಳಿಂದ ನಾಲ್ಕು ಕೇಂದ್ರಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್ಪೋರ್ಟ್, ವೀಸಾ ಮತ್ತು ದಾಖಲೆಗಳ ದೃಢೀಕರಣ ಸೇವೆಗಳನ್ನು ಅಲ್ ಹಿಂದ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಗೆ ಹೊರಗುತ್ತಿಗೆ ನೀಡಿದ ಬಳಿಕ ಯುಎಇಯ ವಿವಿಧ ಎಮಿರೇಟ್ಗಳಲ್ಲಿ ಒಟ್ಟು 16 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. .
ಆದರೆ, ಉಳಿದ 12 ಕೇಂದ್ರಗಳು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿವೆ. ಅಲ್ ದಾನಾ, ಅಲ್ ಐನ್, ಮದೀನತ್ ಝಾಯೆದ್, ಅಲ್ ಧಫ್ರಾ, ಘಯಾತಿ, ಬರ್ ದುಬೈ, ಇಂಡಿಯನ್ ಅಸೋಸಿಯೇಷನ್ ಶಾರ್ಜಾ, ಅಜ್ಮಾನ್, ಉಮ್ಮುಲ್ ಖುವೈನ್, ರಾಸ್ ಅಲ್ ಖೈಮಾ, ಫುಜೈರಾ, ಕಲ್ಬಾ ಮತ್ತು ಖೋರ್ ಫುಕ್ಕಾನ್ನಲ್ಲಿರುವ ಕೇಂದ್ರಗಳು ಎಂದಿನಂತೆ ಸೇವೆ ಮುಂದುವರಿಸಲಿವೆ.
ತತ್ಕಾಲ್ ಪಾಸ್ಪೋರ್ಟ್ ಸೇವೆಗಳು, ನವಜಾತ ಶಿಶುಗಳ ಪಾಸ್ಪೋರ್ಟ್ ಅರ್ಜಿಗಳು, ತುರ್ತು ಪ್ರಮಾಣಪತ್ರ (Emergency Certificate – EC) ಅರ್ಜಿಗಳು ಹಾಗೂ ಹಿರಿಯ ನಾಗರಿಕರಿಗೆ ನೇರವಾಗಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಅವಕಾಶವಿದೆ.















ಇನ್ನಷ್ಟು ಸುದ್ದಿಗಳು
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ
ರಿಯಾದ್ ವಿಮಾನ ನಿಲ್ದಾಣ ದಾಳಿ: ಗಾಯಗೊಂಡವರಲ್ಲಿ 11 ಮಂದಿ ಭಾರತೀಯರು- ಭಾರತೀಯ ರಾಯಭಾರ ಕಚೇರಿ
ಡಿ.ಕೆ. ಎಸ್. ಸಿ. ದ . ಕ. ಜಿಲ್ಲಾ ಸಮಿತಿ ಅಧೀನ ನೂತನ ಸುರತ್ಕಲ್ ಘಟಕದ ಉದ್ಘಾಟನೆ
ದಮ್ಮಾಮ್ ವಿಮಾನ ನಿಲ್ದಾಣದ ಮೇಲೂ ದಾಳಿ- ಅಲ್ ಖರ್ಜ್ ಕಡೆಗೂ ಕ್ಷಿಪಣಿ
ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೂತಿ ದಾಳಿ: 12 ಮಂದಿ ಮೃತ್ಯು, 300ಕ್ಕೂ ಅಧಿಕ ಜನರಿಗೆ ಗಾಯ