janadhvani

Kannada Online News Paper

ಬಿಳಿ ಬಣ್ಣದ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ

ರಿಯಾದ್ ವಿಮಾನ ನಿಲ್ದಾಣದಲ್ಲಿ ನಡೆದ ಹೂತಿ ದಾಳಿಯಲ್ಲಿ ಮೃತಪಟ್ಟ ಈಜಿಪ್ಟ್ ಯುವತಿ

ಜಿದ್ದಾ: ರಿಯಾದ್ ವಿಮಾನ ನಿಲ್ದಾಣದಲ್ಲಿ ಕಳೆದ ಶನಿವಾರ ಹೂತಿಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟ ಈಜಿಪ್ಟ್ ಯುವತಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ. ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ 28 ವರ್ಷದ ಅಸ್ಸಾ ಅವರ ಜೀವನವು ಅನಿರೀಕ್ಷಿತವಾಗಿ ಮುಕ್ತಾಯಗೊಂಡಿತು. ಬಿಳಿ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಯನ್ನು ಕೊನೆಯ ವಿದಾಯ ನೀಡಲಾಯಿತು.

ಸೌದಿ ವಿಮಾನಯಾನ ಸಂಸ್ಥೆಯಾದ ‘ಫ್ಲೈನಾಸ್’ (Flynas) ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಅಸ್ಸಾ ಹಾಗೂ ಅವರ ಸಹೋದರಿ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆಯಲ್ಲೇ ಈ ದಾರುಣ ಅಂತ್ಯ ಸಂಭವಿಸಿದೆ. ಈಜಿಪ್ಟ್‌ನಲ್ಲಿರುವ ಅಸ್ಸಾ ಅವರ ಅಲ್-ಅತ್ಫ್ ಗ್ರಾಮದಲ್ಲಿ ಮೃತದೇಹವನ್ನು ದಫನ ಮಾಡಲಾಯಿತು.

ಕುಟುಂಬದ ಮನೆಯಿಂದ ಮೃತದೇಹವನ್ನು ಹೊತ್ತೊಯ್ದ ಪೆಟ್ಟಿಗೆಯ ಮೇಲೆ ಅಸ್ಸಾ ಅವರ ಬಿಳಿ ಮದುವೆ ಉಡುಗೆಯನ್ನು ಹಾಸಲಾಗಿತ್ತು. ಮನಸ್ಸನ್ನು ಕಲಕುವ ಆ ದೃಶ್ಯವು ಇಡೀ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿತು. ಸಾಮಾಜಿಕ ಜಾಲತಾಣಗಳು ಸೇರಿದಂತೆ ಅಸ್ಸಾ ಅವರ ಅಂತಿಮಯಾತ್ರೆಯ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗಿವೆ.

ರಿಯಾದ್ ವಿಮಾನ ನಿಲ್ದಾಣದ ದಾಳಿಯು ಹಲವಾರು ಕುಟುಂಬಗಳ ಜೀವನದಲ್ಲಿ ಭರಿಸಲಾಗದ ನಷ್ಟವನ್ನುಂಟುಮಾಡಿದೆ. ಅದರಲ್ಲಿ ಅಸ್ಸಾ ರಮ್ಸಿಯ ಈ ನೋವಿನ ಕಥೆಯೂ ಒಂದು. ಭಾರತೀಯರೊಬ್ಬರು ಸೇರಿದಂತೆ ಒಟ್ಟು 13 ಜನರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್ ಮೂಲದ ಮೊಹಮ್ಮದ್ ಯೂಸುಫ್ ಅಲಿ (46) ಅವರ ಅಂತ್ಯಸಂಸ್ಕಾರ ಸೌದಿಯಲ್ಲೇ ನೆರವೇರಿತು. ಸೌದಿಯಲ್ಲಿ ಐಟಿ ವೃತ್ತಿಪರರಾಗಿರುವ ಯೂಸುಫ್ ಅಲಿ ಅವರ ಪತ್ನಿ ಮತ್ತು ಮಕ್ಕಳಿಗೂ ಗಾಯಗಳಾಗಿದ್ದವು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ರಬ್ಬಾನಿ ಅವರು ಪ್ರಸ್ತುತ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿರಿ...