ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದ ಅಡ್ಮಿನಿಸ್ಟ್ರೇಟಿವ್ ಸಪೋರ್ಟ್ (ಆಡಳಿತಾತ್ಮಕ ಬೆಂಬಲ) ವಿಭಾಗದ ಇನ್ನೂ 69 ಹುದ್ದೆಗಳಲ್ಲಿ 100 ಪ್ರತಿಶತ ಸ್ವದೇಶೀಕರಣ (ಸೌದೈಸೇಶನ್) ಜಾರಿಗೆ ತರಲು ಸೌದಿ ಅರೇಬಿಯಾ ನಿರ್ಧರಿಸಿದೆ.ತನ್ನ ದೇಶದ ನಾಗರಿಕರಿಗೆ ಹೆಚ್ಚಿನ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಸಚಿವಾಲಯವು ಈ ಕ್ರಮ ಕೈಗೊಂಡಿದೆ.
ಸೆಕ್ರೆಟರಿ, ಟ್ರಾನ್ಸ್ಲೇಟರ್ (ಅನುವಾದಕ), ಡೇಟಾ ಎಂಟ್ರಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಕೆಲವು ಹುದ್ದೆಗಳಲ್ಲಿ ಆದೇಶ ಬಂದ ದಿನದಿಂದಲೇ (ಏಪ್ರಿಲ್ 5) 100% ಸ್ವದೇಶೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ:
ಹ್ಯೂಮನ್ ರಿಸೋರ್ಸ್ ಕ್ಲರ್ಕ್, ಟೈಪಿಸ್ಟ್, ಸ್ಟೋರ್ ಕೀಪರ್, ಟ್ರಾನ್ಸ್ಲೇಟರ್, ಬಾಡಿಗಾರ್ಡ್, ಸೆಕ್ಯೂರಿಟಿ ಗಾರ್ಡ್, ಪೇಷಂಟ್ ರಿಸೆಪ್ಷನಿಸ್ಟ್, ಕಂಪ್ಲೇಂಟ್ ಕ್ಲರ್ಕ್, ಹೋಟೆಲ್ ರಿಸೆಪ್ಷನಿಸ್ಟ್, ಡೇಟಾ ಎಂಟ್ರಿ ಆಪರೇಟರ್, ಸ್ಟೆನೋಗ್ರಾಫರ್, ಸೆಕ್ರೆಟರಿ, ಎಕ್ಸಿಕ್ಯೂಟಿವ್ ಸೆಕ್ರೆಟರಿ, ಕಸ್ಟಮ್ಸ್ ಬ್ರೋಕರ್, ಲ್ಯಾಂಗ್ವೇಜ್ ಸ್ಪೆಷಲಿಸ್ಟ್, ಕ್ಯಾಶಿಯರ್, ಲೇಬರ್ ಅಫೇರ್ಸ್ ಮ್ಯಾನೇಜರ್, ಪರ್ಸನಲ್ ಮ್ಯಾನೇಜರ್.
ಉಳಿದ 50 ಹುದ್ದೆಗಳಲ್ಲಿ ಸ್ವದೇಶೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಸಚಿವಾಲಯವು ಆರು ತಿಂಗಳ ಕಾಲಾವಕಾಶ ನೀಡಿದೆ. ಇವುಗಳಲ್ಲಿ ಒಳಗೊಂಡಿರುವ ಪ್ರಮುಖ ಹುದ್ದೆಗಳು ಹೀಗಿವೆ:
ಸೈನ್ ಲ್ಯಾಂಗ್ವೇಜ್ ಇಂಟರ್ಪ್ರಿಟರ್, ಸೆಕ್ಯೂರಿಟಿ ಕ್ಯಾಮೆರಾ ಮಾನಿಟರ್, ಶಿಪ್ಪಿಂಗ್ ಕ್ಲರ್ಕ್, ರಿಸೆಪ್ಷನಿಸ್ಟ್, ಇನ್ಫಾರ್ಮೇಶನ್ ಕ್ಲರ್ಕ್, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, ಗೌರ್ನಮೆಂಟ್ ರಿಲೇಶನ್ಸ್ ಕ್ಲರ್ಕ್ (ಜಿ.ಆರ್.ಒ), ಪಿ.ಆರ್.ಒ, ಪಬ್ಲಿಕ್ ರಿಲೇಶನ್ಸ್ ಎಕ್ಸ್ಪರ್ಟ್, ರಿಕ್ರೂಟ್ಮೆಂಟ್ ಸ್ಪೆಷಲಿಸ್ಟ್, ಹ್ಯೂಮನ್ ರಿಸೋರ್ಸ್ ಕನ್ಸಲ್ಟೆಂಟ್ ಮುಂತಾದವುಗಳು.
ಇದಲ್ಲದೆ ಹ್ಯೂಮನ್ ರಿಸೋರ್ಸ್ ಆಪರೇಷನ್ಸ್ ಮ್ಯಾನೇಜರ್, ಟ್ಯಾಲೆಂಟ್ ಮ್ಯಾನೇಜರ್, ರಿಕ್ರೂಟ್ಮೆಂಟ್ ಮ್ಯಾನೇಜರ್, ಲೇಬರ್ ಆಫೀಸ್ ಮ್ಯಾನೇಜರ್ ನಂತಹ ಉನ್ನತ ಹುದ್ದೆಗಳಲ್ಲೂ ಈ ಅವಧಿಯೊಳಗೆ ಸ್ವದೇಶಿಗಳನ್ನು ನೇಮಿಸಬೇಕಾಗುತ್ತದೆ.
ಒಬ್ಬ ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಖಾಸಗಿ ಸಂಸ್ಥೆಗಳಿಗೂ ಈ ನಿಯಮ ಅನ್ವಯವಾಗಲಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ದಂಡ ವಿಧಿಸಲಾಗುವುದು ಎಂದು ಸಚಿವಾಲಯವು ಎಚ್ಚರಿಸಿದೆ. ಇದಕ್ಕೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ನೆರವಾಗಲು ಸರ್ಕಾರವು ವಿವಿಧ ಪ್ರೋತ್ಸಾಹಕ ಯೋಜನೆಗಳನ್ನೂ ಘೋಷಿಸಿದೆ.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?