ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಅಬುದಾಬಿಯಲ್ಲಿ ನಡೆದ ಇರಾನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅಬುದಾಬಿಯ ಸ್ವೆಹಾನ್ ಸ್ಟ್ರೀಟ್ನಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಬುದಾಬಿ ಮೀಡಿಯಾ ಆಫೀಸ್ ತಿಳಿಸಿದೆ. ಮೃತರನ್ನು ಇನ್ನು ಗುರುತಿಸಲಾಗಿಲ್ಲ. ದಾಳಿಯಿಂದಾಗಿ ಹಲವಾರು ವಾಹನಗಳು ಜಖಂಗೊಂಡಿವೆ.
ಸ್ವೈಹಾನ್ ಸ್ಟ್ರೀಟ್ ಮೇಲೆ ನಡೆದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತಡೆಯುವ ಸಂದರ್ಭದಲ್ಲಿ, ಅದರ ಅವಶೇಷಗಳು ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿವೆ. ಇದರೊಂದಿಗೆ ಯುಎಇಯಲ್ಲಿ ಈವರೆಗೆ ನಡೆದ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ. ದಾಳಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
139 ವರ್ಷಗಳ ಬಳಿಕ ಇದೇ ಮೊದಲು; ಬಕ್ರೀದ್ ದಿನದಂದು ಅಪರೂಪದ ಖಗೋಳ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಮಕ್ಕಾ
ಹಜ್ ವಂಚನೆ: ಭಾರತೀಯರು ಸೇರಿದಂತೆ ನಾಲ್ವರ ಬಂಧನ
ಅಲ್ಲಾಹನ ಅತಿಥಿಗಳ ಹರಿವು… ಹಜ್ಗೆ ಇನ್ನು ಕೇವಲ 2 ದಿನಗಳು ಬಾಕಿ
‘ನೋ ಕ್ಯಾಶ್’ ; ಜೂನ್ ಒಂದರಿಂದ ದುಬೈನಲ್ಲಿ ಪಾರ್ಕಿಂಗ್ ಮೀಟರ್ಗಳಲ್ಲಿ ನಗದು ವ್ಯವಹಾರ ರದ್ದು
ಈದುಲ್ ಅದ್’ಹಾ(ಬಕ್ರೀದ್): ಮೇ 26 ರಿಂದ ಆರು ದಿನಗಳ ರಜೆ ಘೋಷಣೆ
ಖಾಸಗಿ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿ: ಇನ್ನು ಮುಂದೆ 1ನೇ ತಾರೀಖಿಗೆ ವೇತನ ಕಡ್ಡಾಯ
ದುಲ್ ಹಜ್ಜ್ ಚಂದ್ರ ದರ್ಶನ : ಗಲ್ಫ್ ರಾಷ್ಟ್ರಗಳಲ್ಲಿ ಮೇ.27 ರಂದು ಈದುಲ್ ಅದ್’ಹಾ
ಕೇಳಿ.. ಉತ್ತರಿಸಬಲ್ಲೆ… : ಮಕ್ಕಾ, ಮದೀನಾ ಹರಮ್ ಮಸೀದಿಗಳಲ್ಲಿ ಬಹುಭಾಷಾ ಎಐ (AI) ಸ್ಮಾರ್ಟ್ ರೋಬೋಟ್ ಸೇವೆ
ಅಬ್ದುಲ್ ರಹೀಮ್ ಬಿಡುಗಡೆಗೆ ಕ್ಷಣಗಣನೆ: ಮೇ 20ರಂದು ಜೈಲುವಾಸದ ಅವಧಿ ಪೂರ್ಣ
ಮಕ್ಕಾದಲ್ಲಿ ಪೊಲೀಸರ ಮಿಂಚಿನ ದಾಳಿ: ನಕಲಿ ದಾಖಲೆ ತಯಾರಿಸುತ್ತಿದ್ದ 18 ಜನರ ತಂಡ ಬಂಧನ