ಮಂಗಳೂರು : ದಾರುಲ್ ಮುಸ್ತಫಾ ಅಕಾಡೆಮಿ ನಚ್ಚಬೆಟ್ಟು ಸಂಸ್ಥೆಯ ವತಿಯಿಂದ ಇದರ ದಶಮಾನೋತ್ಸವ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವೂ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ರಕ್ತದಾನವೂ ಮಹಾದಾನವಾಗಿದೆ.ರಕ್ತದೊತ್ತಡ ರಾಜ್ಯದಾದ್ಯಂತ ತೀವ್ರವಾಗಿರುವಾಗ ಇಂತಹ ಸಂಘಸಂಸ್ಥೆಗಳು ಸ್ವಯಂಪ್ರೇರಿತ ರಕ್ತದಾನ ಮಾಡುವುದು ಪ್ರಶಂಸನೀಯ ಎಂದು ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಅಲ್ಪನ್ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸುಮಾರು 33 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಕಾರ್ಯಕ್ರಮವನ್ನು ಕಣಚೂರು ಮೆಡಿಕಲ್ ಕಾಲೇಜು ಬ್ಲಡ್ ವಿಭಾಗಾಧಿಕಾರಿ ವೆಂಕಟ್ ರಾಜ್ ಉದ್ಘಾಟಿಸಿದರು.ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕರೀಂ ಕದ್ಕಾರ್,ಲತೀಫ್ ಪರ್ತಿಪ್ಪಾಡಿ,ರಾಫೀ ಅಹ್ಸನಿ,ಮಅ್ ರೂಪ್ ಸುಲ್ತಾನಿ,ನೌಶಾದ್ ಸುಲ್ತಾನಿ,ಅಶ್ರಫ್ ವಳಚ್ಚಿಲ್,ಇಸ್ಮಾಯಿಲ್ ಹನೀಫಿ ಮುಂತಾದವರು ಉಪಸ್ಥಿತರಿದ್ದರು.



