ಮಂಗಳೂರು: ಕಳೆದ 12 ವರ್ಷಗಳಿಂದೀಚೆಗೆ ಕರ್ನಾಟಕದ ಸುನ್ನೀ ಸಂಘಟನೆಯ ದೊಡ್ಡ ಕನಸಾಗಿರುವ ಅಡ್ಯಾರ್ ಕಣ್ಣೂರು ಸುನ್ನೀ ಆಸ್ಥಾನ ಕೇಂದ್ರವು ಆರ್ಥಿಕ ಅಡಚಣೆಯಿಂದ ನಿರಂತರ ಮೊಟಕುಗೊಳ್ಳುತ್ತಿದ್ದ ಕಾಮಗಾರಿಯಿಂದ ಕನಸು ನನಸಾಗದೇ ಬಾಕಿ ಉಳಿದಿದೆ.
ಈ ಕೇಂದ್ರದ ನಿರ್ಮಾಣಕ್ಕಾಗಿ ಕೆ.ಸಿ.ಎಫ್, ಮುಸ್ಲಿಂ ಜಮಾಅತ್, ಎಸ್ ವೈ ಎಸ್ ,ಎಸ್ ಎಸ್ ಎಫ್ ,ಎಸ್ ಎಮ್ ಒ, ಎಸ್ ಜೆ ಎಮ್ ಕಾರ್ಯಕರ್ತರು ಸಾಕಷ್ಟು ತಮ್ಮ ಬೆವರು ಸುರಿಸಿದ್ದಾರೆ.
ಇಂದು ಆಸ್ಥಾನ ಕೇಂದ್ರಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್ ಹಾಗೂ ಮಾಜಿ ಶಾಸಕರಾದ ಮೊಯ್ದೀನ್ ಬಾವಾ ಹಾಗೂ ಶೌಕತ್ ಅಲಿ ಆಗಮಿಸಿ ಅಡ್ಯಾರ್ ಮರ್ಕಝ್ ಇಸ್ಲಾಮಿ ಕಟ್ಟಡವನ್ನು ಪರಿಶೀಲಿಸಿದರು.
ಸಹೋದರ ಮರ್ಹೂಂ ಮುಮ್ತಾಜ್ ಅಲಿಯನ್ನು ನೆನಪಿಸಿಕೊಂಡು ಭಾವುಕರಾದ ಬಿಎಂ ಫಾರೂಕ್ , ಮೊಟಕುಗೊಂಡಿರುವ ಕಾಮಗಾರಿಯ ಇನ್ನುಳಿದ 29ಸಾವಿರ ಚದರ ಅಡಿಗೆ ಬೇಕಾದ ಟೈಲ್ಸ್ , ಗ್ರಾನೈಟ್, ಎಕ್ಸ್ಟೀರಿಯಲ್ ಗ್ಲಾಸ್ ಎಲ್ಲವೂ ನೀಡುವ ಭರವಸೆ ನೀಡಿ , ಸ್ಥಳದಿಂದಲೇ ಬೇಕಾದವರನ್ನು ಸಂಪರ್ಕಿಸಿ ನಾಳೆಯಿಂದಲೇ ಕಾಮಗಾರಿ ಚಾಲನೆ ನೀಡಲು ಹೇಳಿದರು.
ಇನ್ನುಳಿದ ಕಾಮಗಾರಿಯನ್ನು ಬಿಎಂ ಫಾರೂಕ್ ಸಹೋದರರು ಪೂರ್ಣಗೊಳೀಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಸಹೋದರ ಮರ್ಹೂಂ ಮುಮ್ತಾಜ್ ಅಲಿಗಾಗಿ , ಮಗ್ಫಿರತ್ಗಾಗಿ ಎಲ್ಲರೂ ಪ್ರಾರ್ಥಿಸುವಂತೆ ಭಿನ್ನವಿಸಿಕೊಂಡಿದ್ದಾರೆ.
ವಕ್ಫ್ ಕೌನ್ಸಿಲ್ ಹಾಗೂ ಮುಸ್ಲಿಮ್ ಜಮಾಆತ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿಯವರ ವಿನಂತಿ ಮೇರೆಗೆ ಆಸ್ಥಾನ ಕೇಂದ್ರಕ್ಕೆ ಭೇಟಿ ನೀಡಿದ ಬಿ ಎಂ ಫಾರೂಕ್ ಜೊತೆಗೆ ಸಹೋದರರಾದ ಮಾಜಿ ಶಾಸಕ ಮೊಯ್ದೀನ್ ಬಾವಾ ,ಶೌಕತ್ ಅಲಿ ಹಾಜರಿದ್ದರು.
ಜೊತೆಗೆ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಹಾಗೂ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ , ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು , ಕೆ ಸಿ ಎಫ್ ನಾಯಕರಾದ ಕಮರುದ್ದೀನ್ ಗೂಡಿನಬಳಿ, ಬಶೀರ್ ತಲಪಾಡಿ,ಅಬ್ದುಲ್ ಹಮೀದ್ ಅರೋಮ್ಯಾಕ್ಸ್ ಉಳ್ಳಾಲ, ರಫೀಕ್ ಸೂರಿಂಜೆ, ಅಶ್ರಫ್ ಕಿನಾರಾ, ಅಬ್ದುರ್ರಹ್ಮಾನ್ ಮೊಗರ್ಪನೆ ಉಪಸ್ಥಿತರಿದ್ದರು.



