janadhvani

Kannada Online News Paper

ಸೌದಿ ಅರೇಬಿಯಾ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಮೃತ್ಯು

ಮದೀನಾ-ಜೆದ್ದಾ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇರಳ ರಾಜ್ಯದ ಮಲಪ್ಪುರಂನ 4 ಜನರು ಮರಣ ಹೊಂದಿದ್ದಾರೆ .

ಅಬ್ದುಲ್ ಜಲೀಲ್ ಮತ್ತು ಅವರ ಕುಟುಂಬವು ಜಿದ್ದಾ ಶರಫಿಯಾದ ಅಸ್ಕನ್ ಕಟ್ಟಡದಲ್ಲಿ (ಕೂಟ ಕಟ್ಟಡ) ವಾಸಿಸುತ್ತಿದ್ದರು. ಅವರು ತೀರ್ಥಯಾತ್ರೆಗಾಗಿ ಮದೀನಾಕ್ಕೆ ಹೋಗಿದ್ದರು ಎಂದು ವರದಿಯಾಗಿದೆ.

ಅವರು ಪ್ರಯಾಣಿಸುತ್ತಿದ್ದ ವಾಹನವು ಹುಲ್ಲು ಸಾಗಿಸುವ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿ 7 ಜನರಿದ್ದರು. 3 ಮಕ್ಕಳು 2 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳಲ್ಲಿದ್ದಾರೆ.