✍️ಅಶ್ರಫ್ ಕಿನಾರ ಮಂಗಳೂರು
ಮಾನ್ಯರೇ ಪುತ್ತೂರಿನಲ್ಲಿ ಒಂದು ಅಕ್ರಮ ಸಾಗಾಟ ನಡೆದಿದೆ ಎಂದು ಕಾಣಲು ಸಾದ್ಯವಾಯಿತು. ಅಲ್ಲಿ ತಲವಾರು ಕಾಣುತಿತ್ತು..ಶಾಸಕರ ಹೇಳಿಕೆಯೂ ಗಮನಿಸಿದೆ. ಒಂದು ಅಕ್ರಮ ಕಂಡರೆ ಅದನ್ಮು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಮುಂದಿನ ಕಾರ್ಯಾಚರಣೆ ಅಧಿಕಾರಿಗಳಿಗೆ ಬಿಟ್ಟದ್ದು.
ಆದರೆ ಪುತ್ತೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ನಡುರಸ್ತೆಯಲ್ಲಿ ಅಕ್ರಮ ಸಾಗಾಣಿಕೆ ಎಂಬ ಲಾರಿಯನ್ನು ತಡೆದು ನಿಲ್ಲಿಸಿ ಅಧಿಕಾರಿಗಳ ಎದುರೆ ಕಾನೂನನ್ನು ಕೈಗೆತ್ತಿ ತಳವಾರು ತಂದು ಕೆಲವು ಕೃತ್ಯಗಳನ್ನು ಮಾಡುವುದು ವಿಡಿಯೋ ಮೂಲಕ ನೋಡಲು ಸಾಧ್ಯವಾಯಿತು ನಂತರ ಪುತ್ತೂರು ಶಾಸಕರ ಹೇಳಿಕೆಯು ಕಂಡು ಬಂತು ಅಕ್ರಮಗಳು ನಡೆದರೆ ಅವರ ವಿರುದ್ಧ ಕೇಸು ದಾಖಲಿಸಿ ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷೆ ಸಿಗಬೇಕಾದದ್ದು ಕೋರ್ಟ್ ವಿಧಿಸುತ್ತದೆ,
ನಡು ರಸ್ತೆಯಲ್ಲಿ ನಿಲ್ಲಿಸಿ, ಅಲ್ಲಿಯೇ ವಿಧಿ ವಿಧಿಸುವುದು ಯಾವ ಕಾನೂನು ಎಂದು ನಮಗೆ ತಿಳಿದಿಲ್ಲ ಅಕ್ರಮ ತಲ್ವಾರ್, ಯಾರ ಗಾಡಿಯಲ್ಲಿ ಬಂದಿದ್ದು ಎಂದು ಕೂಡಲೆ ತನಿಖೆ ನಡೆಸಬೇಕು ಶಾಸಕರು ಎಲ್ಲವನ್ನು ಅರಿತು ನೀಡಿದ ಹೇಳಿಕೆ ಸಮಾಜಕ್ಕೆ ನೀಡುವ ಸದುಪದೇಶ ಅಲ್ಲ ಅಕ್ರಮ ವ್ಯಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಲ್ಲಿ ಅದಕ್ಕೆ ಸಂಬಂಧಪಟ್ಟ ವ್ಯವಸ್ಥೆಗಳು ಇದೆ ಶಾಸಕರೇ ಗುಂಡು ಹಾರಿಸಲು ಸೂಚಿಸುವುದು ಅವರ ವರ್ಚಸ್ಸಿಗೆ ಅಷ್ಟೊಂದು ಸೂಕ್ತವಲ್ಲದ ಹೇಳಿಕೆಯಾಗಿದೆ ಈ ಹೇಳಿಕೆಯನ್ನು ಸಮುದಾಯದ , ಸಮಾಜದ ಪರವಾಗಿ ಖಂಡಿಸುತ್ತಿದ್ದೇನೆ.
ಶಾಸಕರು ಈ ಹೇಳಿಕೆಯನ್ನು ಹಿಂಪಡಯಬೇಕು ಅದೇ ರೀತಿ ಅಧಿಕಾರಿಗಳು ಅಕ್ರಮ ಸಾಗಾಟ ಮಾಡಿದವರನ್ನು, ಕಾನೂನು ಕೈಗೆತ್ತಿದ್ದವರನ್ನು ತಲವಾರು ಎಲ್ಲಿಂದ ಬಂತು ಎಂಬುದನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು.ತಪ್ಪು ಯಾರು ಮಾಡಿದರು ತಪ್ಪೇ ತಪ್ಪಿಗೆ ಶಿಕ್ಷೆ ನಡು ರಸ್ತೆಯಲ್ಲಿ ಅಲ್ಲ ಅದಕ್ಕೊಂದು ವ್ಯವಸ್ಥೆ ಇಲ್ಲಿ ಇದೆ. . ಈ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಿ ಕೊಡಬೇಕು.







