ಮನಾಮ: ಮುತ್ತು ನಬಿ (ﷺِ) ರವರ 1500 ನೇ ಜನ್ಮ ದಿನಾಚರಣೆಯ ಭಾಗವಾಗಿ ”’ಪ್ರವಾದಿ (ﷺِ) ಕಾಲಾತೀತ ಮಾರ್ಗದರ್ಶಿ” ಎಂಬ ಘೋಷಣೆಯೊಂದಿಗೆ ದಿನಾಂಕ 29-08-2025 ರಾತ್ರಿ 06:30ಕ್ಕೆ ಸರಿಯಾಗಿ ಮನಾಮ ಕನ್ನಡ ಭವನದಲ್ಲಿ ನಡೆಯಲಿರುವ ಅಂತರ್ರಾಷ್ಟೀಯ ಮೀಲಾದ್ ಕಾನ್ಫೆರನ್ಸ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸಮಿತಿಯ ನಾಯಕರು ಕರೆ ನೀಡಿದ್ದಾರೆ.
ಅಸ್ಸಯ್ಯಿದ್ ಸಾದಾತ್ ತಂಙಳ್ ಬಾಅಲವಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ಹಾಗೂ ದುಆ ಆಶೀರ್ವಚನೆ ನೀಡಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಉಲಾಮಾಗಳು, ಉದ್ಯಮಿಗಳು ಹಾಗೂ ಅರಬಿ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಕೆಸಿಎಫ್ ಬಹರೈನ್ ರಾಷ್ಟೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಮುಆಝ್ ಉಜಿರೆ , ಮೀಲಾದ್ ಸ್ವಾಗತ ಸಮಿತಿ ಚೆರ್ಮ್ಯಾನ್ ಅಬ್ದುಲ್ ಮಜೀದ್ ಝುಹುರಿ ಸುಳ್ಯ, ಕನ್ವೀನರ್ ಇಕ್ಬಾಲ್ ಮಂಜನಾಡಿ, ಫೈನಾನ್ಸ್ ಕಂಟ್ರೋಲರ್ ಲತೀಫ್ ಪೇರೋಳಿ, ವೈಸ್ ಚೇರ್ ಮ್ಯಾನ್ ಸಮದ್ ಉಜಿರೆಬೆಟ್ಟು, ಮೀಡಿಯಾ ಚೆರ್ಮ್ಯಾನ್ ಮೂಸಾ ಪೈಂಬಚಾಲ್ ಹಾಗೂ ಕೆಸಿಎಫ್ ನೋರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ವೇನೂರ್ ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು.


