ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಗಾಳಿ ಮಳೆ ಬೀಸುತ್ತಿದೆ. ಎಲ್ಲೆಲ್ಲೂ ನೀರೆ. ಇವತ್ತು (ಸೋಮವಾರ) ನಾನು ಬೆಳಗ್ಗೆ ಸುರತ್ಕಲ್ ಕಡೆ ಹೊರಟು ಕೂಳೂರು ಹತ್ತಿರವಾಗುತ್ತಿದ್ದಂತೆ ಭಾರೀ ಗಾಳಿ ಬೀಸಿದ ಪರಿಣಾಮ ಗಾಡಿ ಚಲಾಯಿಸಲಾಗದೆ ಪಕ್ಕದ ಶೊರೂಂ ಸನಿಹದಲ್ಲಿ ನಿಂತೆ. ಹಲವು ಡಿಗ್ರಿ ವಿದ್ಯಾರ್ಥಿಗಳು ಬಸ್ಸಿಂದ ಇಳಿದು ಕಾಲೇಜು ಹೋಗುವುದು ಕಾಣಲು ಸಾಧ್ಯವಾಯ್ತು. ಅದರೆ ಎಲ್ಲರೂ ಬೀಸಿದ ಗಾಳಿ ಮಳೆಗೆ ಸಂಪೂರ್ಣ ಒದ್ದೆಯಾಗಿದ್ದರು. ಇವರು ಕಾಲೇಜು ಹೋಗಿ ಮೈಯಲ್ಲಿರುವ ಒದ್ದೆ ಬಟ್ಟೆಯಲ್ಲೇ ಹೇಗೆ ಕ್ಲಾಸ್ ನಲ್ಲಿ ಕೂರುವುದು!? . ಹೇಗೆ ಕಲಿಯುವರು?..ಎಂದು ಆಲೋಚಿಸಿದೆ.
ಮತ್ತೆ ನೇರವಾಗಿ ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ವಿಚಾರಿಸಿದೆ. ಶಾಲಾ,ಪಿಯು ಕಾಲೇಜಿಗೆ ರಜೆ ಸೂಚಿಸಿದ್ದೀರಿ. ಡಿಗ್ರಿಯವರಿಗೆ ಯಾರು ರಜೆ ನೀಡಬೇಕೆಂದು ಕೇಳಿದೆ. ಅದಕ್ಕೆ ಅವರು ಅದು ಆಯಾ ಶಾಲಾ ಮಂಡಳಿ ತೀರ್ಮಾನಿಸಬೇಕೆಂದರು. ಹೆತ್ತವರು ಪ್ರಿನ್ಸಿಪಾಲ್ ಗೆ ಕರೆ ಮಾಡಿ ತಿಳಿಸಲಿ ಎಂದರು.ಇದು ನಡೆಯುವ ಕೆಲಸವೇ…?
ಎಲ್ಲಾ ಡಿಗ್ರಿ ಕಾಲೇಜು ಆಡಳಿತ ಮಂಡಳಿಯೊಂದಿಗೆ ಬಹಿರಂಗ ವಿನಂತಿ.
ಜಿಲ್ಲಾಧಿಕಾರಿಯವರು ರಜೆ ಸೂಚಿಸದಿದ್ದರೂ, ಮಕ್ಕಳ ಸುರಕ್ಷತೆಗಾಗಿ ದಯವಿಟ್ಟು ಪರಿಸ್ಥಿತಿ ತಿಳಿದು ಆಯಾ ಆಡಳಿತ ಮಂಡಳಿ ದಯವಿಟ್ಟು ರಜೆ ಘೋಷಿಸಬೇಕೆಂದು ವಿನಂತಿಸುತ್ತಿದ್ದೇನೆ.
ಅಶ್ರಫ್ ಕಿನಾರ ಮಂಗಳೂರು.
(ಉಪಾಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಬ್ ಸಲಹಾ ಸಮಿತಿ)
















ಇನ್ನಷ್ಟು ಸುದ್ದಿಗಳು
‘ಇಸ್ಲಾಂ ಮತ್ತು ಕಾರ್ಮಿಕರ ಘನತೆ’ – ಇದು ಕೇವಲ ರಜೆಯಲ್ಲ,ಬದುಕಿನ ದಾರಿ!
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ