ಕುವೈತ್ ಸಿಟಿ: ಯುವ ಧಾರ್ಮಿಕ ವಿದ್ವಾಂಸ, ಇಖ್ಬಾಲ್ ಫೈಝಿ ಕಿನ್ಯಾ ಅವರು ಗುರುವಾರ ಮುಂಜಾನೆ ಕುವೈತ್ನಲ್ಲಿ ತಮ್ಮ ವಾಸಸ್ಥಳದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಿನ್ಯಾ ಪಡ್ಪು ನಿವಾಸಿ ಮರ್ಹೂಮ್ ಸೂಫಿಚ್ಚ ಮತ್ತು ಆಯಿಶಾ ಅವರ ಪುತ್ರರಾದ ಇವರು ಸಣ್ಣ ಪ್ರಾಯದಿಂದಲೇ ಧಾರ್ಮಿಕ ಸಂಘಟನಾ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸುಮಾರು 18 ವರ್ಷಗಳಿಂದ ಕುವೈತ್ನಲ್ಲಿ ಅನಿವಾಸಿ ಜೀವನ ನಡೆಸುತ್ತಿದ್ದ ಅವರು, ಕುವೈತ್ ಕೇರಳ ಇಸ್ಲಾಮಿಕ್ ಕೌನ್ಸಿಲ್ KIC ಇದರ ಸಕ್ರಿಯ ಕಾರ್ಯಕರ್ತರಾಗಿದ್ದರು. KIC ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿಯೂ, ಪ್ರಸ್ತುತ ಹವಲ್ಲಿ ವಲಯ ಅಧ್ಯಕ್ಷರಾಗಿ ಸೇವೆ ಗೈಯ್ಯುತ್ತಿದ್ದರು.
ಕಿನ್ಯಾ ಎಸ್ಕೆ ಎಸ್ಸೆಸ್ಸೆಫ್ ಇದರ ಸದಸ್ಯರೂ ಧಾರ್ಮಿಕ ಸಂಘ, ಸಂಸ್ಥೆಗಳ ಹಿತೈಷಿಯೂ, ದೀನೀ ರಂಗದಲ್ಲಿ ನಿಷ್ಠಾವಂತ ಸೇವೆ ಗೈದಿರುವ ಇಖ್ಬಾಲ್ ಫೈಝಿಯವರು, ಪ್ರಮುಖ ಧಾರ್ಮಿಕ ವಿದ್ವಾಂಸರಾದ ಶೈಖುನಾ ಕೆ.ಎಲ್.ಅಬ್ದುಲ್ ಖಾದರ್ ಅಲ್ ಖಾಸಿಮಿ (ಪೇರಾಲ್ ಉಸ್ತಾದ್) ಮೊಂಟೆಪದವು ಅವರ ಪ್ರಮುಖ ಶಿಷ್ಯರಲ್ಲಿ ಓರ್ವರಾಗಿದ್ದಾರೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಜಾಮಿಯಾ ನೂರಿಯಾ ದಿಂದ ಫೈಝಿ ಬಿರುದು ಪಡೆದು ಧಾರ್ಮಿಕ ಸೇವಾ ರಂಗಕ್ಕಿಳಿದ ಅವರು, ವಿವಿಧ ಮೊಹಲ್ಲಾಗಳಲ್ಲಿ ಖತೀಬರಾಗಿ ಸೇವೆ ಗೈದಿದ್ದಾರೆ. ಅವರು ಪತ್ನಿ ಹಾಗೂ ಮೂರು ಹೆಣ್ಣು ಒಂದು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಫೈಝಿಯವರ ಅಕಾಲಿಕ ಅಗಲಿಕೆಗೆ ಹಲವು ಸಂಘ, ಸಂಸ್ಥೆಗಳ ನಾಯಕರು, ವಿದ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ಸಂತಾಪವನ್ನು ಸೂಚಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಅಲ್ಲಾಹನು ದಯಪಾಲಿಸಲಿ, ಅವರ ಪರಲೋಕ ಜೀವನವನ್ನು ಅಲ್ಲಾಹು ಹಸನಾಗಿಸಲಿ ಎಂದು ದುಆ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.
ಇಂದು ರಾತ್ರಿ 9 ಗಂಟೆ ಸುಮಾರಿಗೆ ಕಲ್ಲಿಕೋಟೆ ವಿಮಾನ ನಿಲ್ದಾಣ ಮೂಲಕ ಅವರ ಮೃತದೇಹ ವನ್ನು ಊರಿಗೆ ತರಲಾಗುತ್ತಿದ್ದು, ಫಜ್ರ್ ನಮಾಜಿನ ಬಳಿಕ ಕಿನ್ಯಾ ಕೇಂದ್ರ ಜುಮ್ಮಾ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಸಂಘಟನಾ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ