ಪುತ್ತೂರು: ಕರ್ನಾಟಕ ರಾಜ್ಯಾದ್ಯಂತ ಎಸ್ ವೈಎಸ್ ನ ಸದಸ್ಯತ್ವ ಅಭಿಯಾನ ವು ಜನವರಿ 1 ರಿಂದ 20 ರವರೆಗೆ ಸತ್ಪತಥದ ಸಂಕಲ್ಪ ಎಂಬ ಘೋಷಣೆಯೊಂದಿಗೆ ನಡೆಯಲಿದೆ. ಇದರ ದ.ಕ ಈಸ್ಟ್ ಜಿಲ್ಲಾ ಮಟ್ಟದ ಕಾರ್ಯಾಗಾರ ವು ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಪ್ರೆಸ್ಟೀಜ್ ಪೆವಿಲಿಯನ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಹಂಝ ಮದನಿ ಬೆಳ್ತಂಗಡಿ ರವರು ಉದ್ಘಾಟಿಸಿದರು.
ಎಸ್ ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ಹಾಗೂ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ರವರು ಸದಸ್ಯತ್ವ ಅಭಿಯಾನ ಹಾಗೂ ಚುನಾವಣಾ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಮುಸ್ತಫ ಕೋಡಪದವು,ಜಿಲ್ಲಾ ಪ್ರ ಕಾರ್ಯದರ್ಶಿ ಸ್ವಾಲಿಹ್ ಮುರ .ಕೋಶಾಧಿಕಾರಿ ಶಂಸುದ್ದೀನ್ ಝಂಝಂ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ, ಇಸಾಬ ಕಾರ್ಯದರ್ಶಿ ಉಸ್ಮಾನ್ ಸೋಕಿಲ, ಕಲ್ಛರಲ್ ಕಾರ್ಯದರ್ಶಿ ಶಾಫಿ ಸಖಾಫಿ ಕೊಕ್ಕಡ, ಮಾದ್ಯಮ ಕಾರ್ಯದರ್ಶಿ ಅಬು ಶಝ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುರ್ರಹ್ಮಾನ್ ಸಖಾಫಿ.ಫಾರೂಖ್ ಸಖಾಫಿ, ಅಬ್ದುಲ್ ಅಝೀಝ್ ಚೆನ್ನಾರ್, ಹನೀಪ್ ಸಖಾಫಿ, ಬೆಳ್ಳಾರೆ, ಕಾಸಿಂ ಮುಸ್ಲಿಯಾರ್ ಉಜಿರೆ,ಖಲಂದರ್ ಪದ್ಮುಂಜ, ಸಲೀಮ್ ಕನ್ಯಾಡಿ,ಸಿದ್ದೀಕ್ ಮಿಸ್ಬಾಹಿ, ಅಬ್ದುರ್ರಹ್ಮಾನ್ ಶರಫಿ, ಯೂಸುಫ್ ಸಖಾಫಿ ಬೆಳಂದೂರು ಹಾಗೂ ಜಿಲ್ಲಾ ವ್ಯಾಪ್ತಿಯ 6 ಝೋನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.