ದೋಹಾ: ಭಟ್ಕಳ ನಿವಾಸಿಯಾಗಿರುವ ರಶೀದ್ ಖಾನ್ ಪಠಾಣ್ (36) ಎಂಬವರು ಕತ್ತರ್ ನ ಅಲ್-ಖೋರ್ ಎಂಬಲ್ಲಿ ಹೃದಯಾಘಾತದಿಂದ ನಿಧನರಾಗಿರುತ್ತಾರೆ. ಭಟ್ಕಳ ಬಂಗಾರಮಕ್ಕಿ ಇಸುಬ್ ಎಂಬವರ ಪುತ್ರರಾಗಿರುವ ಇವರು ಕಳೆದ ಹಲವಾರು ವರ್ಷಗಳಿಂದ ಕತ್ತರ್ ನಲ್ಲಿ ಡ್ರೈವರ್ ಆಗಿ ಕೆಲಸದಲ್ಲಿದ್ದು, ದಿನಾಂಕ 07-08-2024 ಬುಧವಾರದಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.
ಮರಣದ ವಿಷಯ ತಿಳಿದು ತಕ್ಷಣವೇ ಕಾರ್ಯಪ್ರವೃತರಾದ ಕತ್ತರ್ ಕೆಸಿಎಫ್ ಸಂಘಟನೆಯ ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ, ಕತ್ತರ್ ನಲ್ಲಿರುವ ಮೃತರ ಕುಟುಂಬಸ್ಥರನ್ನು ಸಂಪರ್ಕಿಸಿ, ಮೃತದೇಹವನ್ನು ಊರಿಗೆ ತಲುಪಿಸಲು ಅಗತ್ಯವಿರುವ ದಾಖಲೆಗಳ ನಿರ್ವಹಣೆಯ ಕಾರ್ಯ ನಿರ್ವಹಿಸಿದರು.
ಮೃತಹೊಂದಿದ ರಶೀದ್ ಖಾನ್ ರವರು ಇತ್ತೀಚೆಗಷ್ಟೆ ಮದುವೆಯಾಗಿದ್ದು, ತನ್ನ ಪತ್ನಿ, ತಂದೆ, ತಾಯಿ ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ. ಮರಣ ಸುದ್ದಿ ಕೇಳಿ ತುರ್ತಾಗಿ ಕಾರ್ಯಾಚರಣೆಗಿಳಿದ ಕೆಸಿಎಫ್, ತನ್ನ ಸಾಂತ್ವನ ವಿಭಾಗದ ಮೂಲಕ ಅಗತ್ಯ ದಾಖಲೆಗಳನ್ನು ಏರ್ಪಾಡುಗೊಳಿಸಿ, ಕೊನೆಯಲ್ಲಿ ಧಾರ್ಮಿಕ ಸಂಪ್ರದಾಯದಂತೆ ಮಯ್ಯಿತ್ ನಮಾಜ್ ಮತ್ತು ಪ್ರಾರ್ಥನೆ ನಿರ್ವಹಿಸಿ ಮೃತದೇಹವನ್ನು ಊರಿಗೆ ಕಳುಹಿಸಿಕೊಡಲಾಯ್ತು.