janadhvani

Kannada Online News Paper

ಬಿಗ್ ಬಾಸ್ ನ ಒಳಗೇನು? ತನಿಖೆಗೆ ಆದೇಶಿಸಿದ ಹೈಕೋರ್ಟ್

ಕೊಚ್ಚಿ: ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಒಳಗೆ ಏನೇನು ನಡೆಯುತ್ತಿದೆ ಎಂದು ತನಿಖೆ ಮಾಡುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.

ಪ್ರಸಾರ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬುದನ್ನೂ ತನಿಖೆಗೋಳಪಡಿಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ಆದೇಶ ದಲ್ಲಿ ಕೇರಳ ಹೈಕೋರ್ಟ್ ಹೇಳಿದೆ.
ನಿಯಮ ಉಲ್ಲಂಘನೆಯಾದರೆ ಪ್ರದರ್ಶನ ನಿಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಬಹುದು ಎಂದೂ ನ್ಯಾಯಾಲಯ ಹೇಳಿದೆ.

ಎರ್ನಾಕುಲಂನ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಈ ಆದೇಶ ನೀಡಿದೆ. ಅರ್ಜಿಯಲ್ಲಿ ಖಾಸಗಿ ವಾಹಿನಿ ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ದೈಹಿಕ ಹಲ್ಲೆಯೂ ಸೇರಿದ್ದು, ಇದು ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು.