ಸಬರ ಬೈಲ್: ಇಲ್ಲಿನ ವಾದಿ ಇರ್ಫಾನಿ ಅಕಾಡೆಮಿಕ್ ಸೆಂಟರ್ ವತಿಯಿಂದ ಸಮಾಜ ಸೇವಕರಾಗಿರುವ ಹಾಜಿ ಅಬ್ದುಲ್ ಶುಕೂರ್ ಉಳ್ಳಾಳ್ ಅವರನ್ನು ಸನ್ಮಾನಿಸಲಾಯಿತು.
ಅಹ್ಲು ಸುನ್ನತ್ ವಲ್ ಜಮಾತಿನ ಆಶಯ ಆದರ್ಶಗಳಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ದುಬೈ KCF ನ ಗ್ಲೋಬಲ್ ಯುನಿಟಿನ ಅಧ್ಯಕ್ಷರು ಹಾಗೂ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಜಿ ಅಬ್ದುಲ್ ಶುಕೂರ್ ಉಳ್ಳಾಲ್ ಅವರು ವಾದಿ ಇರ್ಫಾನಿ ಅಕಾಡೆಮಿಕ್ ಸೆಂಟರ್ ಸಬರ ಬೈಲ್ ಸಂಸ್ಥೆಯ ಹಿತೈಷಿಯೂ, ಸಹಕಾರಿಯೂ ಆಗಿದ್ದಾರೆ.
ವಾದಿ ಇರ್ಫಾನಿ ವಿದ್ಯಾಸಂಸ್ಥೆಯ ರೂವಾರಿ KPS ಸಯ್ಯಿದ್ ಫಝಲ್ ಜಮಲುಲೈಲಿ ಬಾಖವಿ ಕಾಮಿಲ್ ಸಬರ ಬೈಲ್ ತಂಙಳ್ ಹಾಗೂ ಮಸೀದಿಯ ಅಧ್ಯಕ್ಷರು ಹಾಗೂ ಸಮಿತಿ ಸದ್ಯಸರ ಸಮ್ಮುಖದಲ್ಲಿ ಸಬರ ಬೈಲ್ ಸುನ್ನಿ ಜಮಲುಲ್ ಲೈಲ್ ಜುಮಾ ಮಸೀದಿಯಲ್ಲಿ ಸನ್ಮಾನಿಸಲಾಯಿತು.