ಬೆಳ್ತಂಗಡಿ (ಮಾ-13): ಕೇಂದ್ರ ಸರಕಾರ ಅಸಾಂವಿಧಾನಿಕ CAA ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಮಿನಿ ವಿಧಾನಸಭಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
CAA ಎಂಬುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, CAA ಕಾಯಿದೆಯನ್ನು ಕೇಂದ್ರ ಸರಕಾರ ವಾಪಸು ಪಡೆಯದೆ ಇದ್ದರೆ ಮುಂದಿನ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಉಗ್ರ ಹೋರಾಟವನ್ನು ಎಸ್‌ಡಿಪಿಐ ಮಾಡಲಿದೆ ತಾವೆಲ್ಲರೂ ಎಲ್ಲಾ ರೀತಿಯ ಹೋರಾಟಕ್ಕೆ ಸಜ್ಜಾಗಬೇಕು ಎಂದು ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ದಕ್ಷಿಣ ಕನ್ನಡ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಕ್ಷೇತ್ರ ಉಪಾಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿಗಾಳದ ಅಶ್ಫಾಕ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ಕ್ಷೇತ್ರ ವ್ಯಾಪ್ತಿಯ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಕುವೆಟ್ಟು ಬ್ಲಾಕ್ ಅಧ್ಯಕ್ಷರಾದ ರೌಫ್ ಪುಂಜಾಲಕಟ್ಟೆ ಸ್ವಾಗತಿಸಿ, ಅಶ್ಫಾಕ್ ಪುಂಜಾಲಕಟ್ಟೆ ಧನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಅಲ್ ಹೈದ್ರೋಸಿಯ ಮದ್ರಸಾ ಕೂರತ್: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ
ಅತ್ತಾಜೆ ಮದರಸ ಸ್ಮಾರ್ಟ್ಕ್ಲಾಸ್ ಉಧ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ
ಧರ್ಮಸ್ಥಳ ಬಜರಂಗದಳ ಮುಖಂಡನಿಂದ ದಲಿತ ವ್ಯಕ್ತಿಯ ಹತ್ಯೆ- ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ತಂಡ ಭೇಟಿ
ಜಿಲ್ಲಾಧಿಕಾರಿ ಮತ್ತು ಸಬ್ ಇನ್ಸ್ಪೆಕ್ಟರ್ ಗೆ ಬೆದರಿಕೆ ಹಾಕಿದ ಕೋಮುವಾದಿಗಳನ್ನು ಕೂಡಲೇ ಬಂಧಿಸಿ- PFI ವತಿಯಿಂದ ಪ್ರತಿಭಟನೆ
ಕಾಲೇಜು ವಿದ್ಯಾರ್ಥಿಯ ಡಿಬಾರ್ ಪ್ರಕರಣ: ಪ್ರಿನ್ಸಿಪಾಲ್ ನಡೆಗೆ ಪಾಪ್ಯುಲರ್ ಫ್ರಂಟ್ ಖಂಡನೆ
ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ವಿದ್ಯಾರ್ಥಿ ಡಿಬಾರ್ – ಕ್ಯಾಂಪಸ್ ಫ್ರಂಟ್ ಹೋರಾಟದ ಎಚ್ಚರಿಕೆ
ಅತ್ಯಾಚಾರ ಖಂಡಿಸಿ, ನಾಯಕರ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ