ಬುರೈದ ಜನವರಿ 26: ಕರುನಾಡ ಮಣ್ಣಿನಿಂದ ಸಾವಿರಾರು ಹೊಂಗನಸುಗಳೊಂದಿಗೆ ಜೀವನ ನೌಕೆಯನ್ನು ದಡ ಸೇರಿಸಲು ಮರಳು ನಾಡಿಗೆ ಬಂದ ಕನ್ನಡದ ಮಕ್ಕಳು ರೂಪಿಕರಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದ್ದು ಆ ಬಗ್ಗೆ ವೈವಿಧ್ಯಮಯ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದೆ ಆ ಪ್ರಯುಕ್ತ ಕೆ.ಸಿ.ಎಫ್ ಅಲ್ ಖಸೀಂ ಝೋನ್ ಹಮ್ಮಿಕೊಂಡ ಗೆಸ್ಟ್ ಡೇ ಹಾಗೂ ಗಣರಾಜ್ಯೋತ್ಸವವು ಬುರೈದ ಶೈನ್ ಆಡಿಟೋರಿಯಂನಲ್ಲಿ ಹಲವಾರು ಗಣ್ಯರ ಒಗ್ಗೂಡಿಕೆಯೊಂದಿಗೆ ನಡೆಯಿತು
KCF ನೇತಾರ ಯಾಕೂಬ್ ಸಖಾಫಿ ಉಸ್ತಾದರ ದುವಾದೊಂದಿಗೆ, ಸ್ವಾಗತ ಸಮಿತಿ ಚೆರ್ಮ್ಯಾನ್ ಮುಸ್ತಫಾ ಹಾಸನ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಕಾರ್ಯ ಕ್ರಮವನ್ನು ICF ನೇತಾರ ಹಾಜಿ ಅಬ್ದುಲ್ಲ ಸಕಾಕರ್ ಉದ್ಘಾಟಿಸಿದರು. ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಪ್ರಸ್ತಾವಿಕ ಬಾಷಣ ಮಾಡಿದರು. ಅಲ್ ಖಸಿಂ ಯುನಿವರ್ಸಿಟಿಯ ಖ್ಯಾತ ವೈದ್ಯರಾದ ಡಾ|| ಜಯಶಂಕರ್ ಮತ್ತು ಬುರೈದ ಕಿಂಗ್ ಫಹದ್ ಆಸ್ಪತ್ರೆಯ ಹಿರಿಯ ವೈದ್ಯಾದಿಕಾರಿ ಡಾII ಮುಹಮ್ಮದ್ ಫಿಝಾನ್, ಸಾಮಾಜಿಕ ಕಾರ್ಯಕರ್ತ ಲತೀಫ್ ಶೇರಿ, ಅನ್ಸಾರ್ ಅಲಿ, ಮುಂತಾದವರು ಭಾಗವಹಿಸಿದರು. ಅತಿಥಿಗಳಿಗೆ ಸನ್ಮಾನ ಸ್ವೀಕಾರ ಮಾಡಿ ಇತ್ತೀಚೆಗೆ ಬುರೈದ ದಲ್ಲಿ ಮರಣ ಹೊಂದಿದ ಮರ್ಹೂಂ ಮುಹಮ್ಮದ್ ಕಾಪು ಕುಟುಂಬಕ್ಕೆ ದಾನಿಗಳ ಸಹಾಯದಿಂದ ಸುಮಾರು 75 ಸಾವಿರ ರೂಪಾಯಿಗಳ ಚೆಕ್ ವಿತರಿಸಲಾಯಿತು ಝೋನ್ ಕಾರ್ಯದರ್ಶಿ ಬಶೀರ್ ಕನ್ಯಾನ ಸ್ವಾಗತಿಸಿ ಮುಸ್ತಫಾ ಲತೀಫಿ ವಂದಿಸಿದರು