janadhvani

Kannada Online News Paper

SჄS 30 ನೇ ವಾರ್ಷಿಕ ಸಮ್ಮೇಳನ- ಯಶಸ್ವಿಗೊಳಿಸಲು ಕರ್ನಾಟಕ ಮುಸ್ಲಿಂ ಜಮಾಅತ್ ಕರೆ

ಜನವರಿ 24 ರಂದು ಮೂವತ್ತನೇ ವಾರ್ಷಿಕದ ಸಮಾರೋಪ ಮಂಗಳೂರಿನ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

ಬೆಂಗಳೂರು: ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(SჄS) ಇದರ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನವನ್ನು ವಿಜಯಗೊಳಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಕರೆ ನೀಡಿದೆ.

ಕಳೆದ ಒಂದು ವರ್ಷದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೂವತ್ತನೇ ವರ್ಷಾಚರಣೆಯನ್ನು ಆಚರಿಸುತ್ತಿದ್ದು, ಜನವರಿ 24 ರಂದು ಮೂವತ್ತನೇ ವಾರ್ಷಿಕದ ಸಮಾರೋಪ ಮಂಗಳೂರಿನ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ದೇಶದ ಪ್ರಮುಖ ವಿದ್ವಾಂಸರು, ಸಂಘಟನಾ ನಾಯಕರು, ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಜತೆಗೂಡಲಿದ್ದಾರೆ.
ರಾಜ್ಯಾದ್ಯಂತವಿರುವ ಸುನ್ನೀ ಸಂಘ ಕುಟುಂಬದ ಎಲ್ಲಾ ಘಟಕಗಳ ಕಾರ್ಯಕರ್ತರು, ನಾಗರಿಕರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭವನ್ನು ವಿಜಯಗೊಳಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಕರೆ ನೀಡಿದೆ.

error: Content is protected !! Not allowed copy content from janadhvani.com