ಬೆಳ್ತಂಗಡಿ: SჄS ಕರ್ನಾಟಕ ರಾಜ್ಯ ಸಮಿತಿಯ 30 ನೇ ವಾರ್ಷಿಕ ಸಮ್ಮೇಳನ ದ ಪ್ರಚಾರಾರ್ಥ SჄS ಬೆಳ್ತಂಗಡಿ ಝೋನ್ ನಡೆಸಿದ ENARGIZE-2K24 ಸುನ್ನೀ ಸಂಘ ಕುಟುಂಬದ ಸಮ್ಮಿಲನ ಕಾರ್ಯಕ್ರಮ ದಿನಾಂಕ 2024 ಜನವರಿ 12 ರಂದು ಮಲ್ಜಅ್ ವಿದ್ಯಾಸಂಸ್ಥೆ ಬಹಳ ಯಶಸ್ವಿಯಾಗಿ ನಡೆಯಿತು.
SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ M.A ಕಾಸಿಂ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾದ ಡಾ! ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಉದ್ಘಾಟನೆ ನೆರವೇರಿಸಿದರು. ಮುಹಮ್ಮದಲಿ ಸಖಾಫಿ ವೆಲ್ಲಿಯಾಡ್, ಕೇರಳ ಮುಖ್ಯಪ್ರಭಾಷಣ ನಡೆಸಿದರು.
ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ, ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ, ವಾದಿ ಇರ್ಫಾನ್ ಸಂಸ್ಥೆಯ ಸಾರಥಿ ಫಝಲ್ ಜಮಲುಲ್ಲೈಲಿ ತಂಙಳ್ ಪ್ರಾಸ್ತಾವಿಕ ಭಾಷಣ ಮಾಡಿದರು. SჄS ರಾಜ್ಯ ಸಮಿತಿ ಪಬ್ಲಿಸಿಟಿ ಕನ್ವೀನರ್ ಮುಹಮ್ಮದಲಿ ಸಖಾಫಿ ಸುರಿಬೈಲ್ 30 ನೇ ವಾರ್ಷಿಕ ಸಮ್ಮೇಳನ ದ ಪ್ರಚಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಆದಂ ಅಹ್ಸನಿ SჄS ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷರಾದ S.M ಕೋಯ ತಂಙಳ್ SჄS ರಾಜ್ಯ ಸಮಿತಿ ನಾಯಕರಾದ ಹಂಝ ಮದನಿ ಗುರುವಾಯನಕೆರೆ, ಜಂಇಯ್ಯತುಲ್ ಮುಫತ್ತಿಷ್
ರಾಜ್ಯಾಧ್ಯಕ್ಷರಾದ ಹಾಫಿಳ್ ಹನೀಫ್ ಮಿಸ್ಬಾಹಿ, ಎಸ್ ಎಂ ಎ ಉಜಿರೆ ಝೋನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಂಡಾಜೆ
ಸ್ವಾಗತ ಸಮಿತಿ ಚೆಯರ್‌ಮೇನ್ ಸಲೀಂ ಕನ್ಯಾಡಿ, SჄS ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ನಝೀರ್ ಪೆರ್ದಾಡಿ, ಕೋಶಾಧಿಕಾರಿ ಹಾರಿಸ್ ಕುಕ್ಕುಡಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶರೀಫ್ ಬೆರ್ಕಳ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಮಾಚಾರು ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಶಾಫಿ ಮದನಿ ಪಾಂಡವರಕಲ್ಲು ಹಾಗೂ ಸುನ್ನೀ ಜಂಇಯ್ಯತುಲ್ ಉಲಮಾ, ಕರ್ನಾಟಕ ಮುಸ್ಲಿಂ ಜಮಾಅತ್ ಸುನ್ನೀ ಯುವಜನ ಸಂಘ,ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನಾಯಕರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕನ್ವೀನರ್ ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು ಸ್ವಾಗತಿಸಿ ವಂದಿಸಿದರು.