janadhvani

Kannada Online News Paper

ವಿಮಾನ ಟಿಕೆಟ್ ದರ ಹೆಚ್ಚಳ: ಉಮ್ರಾ ಯಾತ್ರಿಗಳಿಗೆ ಹೊಡೆತ

ಜಿದ್ದಾ : ರಮಝಾನ್, ಈದುಲ್ ಫಿತರ್ ರಜಾದಿನಗಳಲ್ಲಿ ಊರಿಗೆ ಮರಳಲು ಉದ್ದೇಶಿಸಿರುವ ವಲಸಿಗರ ಉತ್ಸಾಹಕ್ಕೆ ಬರೆ ಎಳೆಯುತ್ತಾ, ಏರ್ಲೈನ್ ​​ಕಂಪನಿಗಳು ಸೌದಿ ವಲಯದಲ್ಲಿ ದರವನ್ನು ಏರಿಸಿದೆ.

ಉಮ್ರಾ ಯಾತ್ರಾರ್ಥಿಗಳು ಮತ್ತು ಬೇಸಿಗೆ ರಜಾ ದಿನಗಳಲ್ಲಿ ಊರಿಗೆ ಮರಳಲು ಉದ್ದೇಶಿಸಿರುವವರಿಂದ ವಿಪರೀತ ಲಾಭವನ್ನು ಪಡೆಯಲು ಸೌದಿ ವಲಯದಲ್ಲಿ ದರವನ್ನು ಹೆಚ್ಚಿಸಲಾಗಿದೆ.

ಪ್ರಸಕ್ತ ದರಕ್ಕಿಂತ ಮೂರು ಪಟ್ಟು ಹೆಚ್ಚಿಸಲಾಗಿದೆ.ಜಿದ್ದಾದಿಂದ ನೇರ ವಿಮಾನ ಸಂಪರ್ಕ ಇಲ್ಲದ ಕಾರಣ ಇತರ ಕನೆಕ್ಷನ್ ವಿಮಾನಗಳನ್ನು ಅವಲಂಬಿಸಬೇಕಾಗಿದೆ. ಇದು ರಂಝಾನ್ ನಲ್ಲಿ ಉಮ್ರಾ ನಿರ್ವಹಿಸಲು ತೆರಳುವವರಿಗೆ ಹೊಡೆತವಾಗಲಿದೆ.

ಕಳೆದ ತಿಂಗಳು ಕೋಝಿಕ್ಕೋಡ್ ನಿಂದ ಉಮ್ರಾ ಯಾತ್ರಾರ್ಥಿಗಳು 50,000 ರೂ.ನಿಂದ 55,000 ರೂ.ಗೆ ನೀಡಬೇಕಾಗಿತ್ತು.ಈ ತಿಂಗಳಿನಿಂದ ಅದು ರೂ 60,000 ರಿಂದ 65,000 ರೂ. ವರೆಗೆ ಹೆಚ್ಚಳವಾಗಲಿದೆ.

ಸೌದಿ ಅರೇಬಿಯಾದಲ್ಲಿ ವಲಸಿಗ ಕಾರ್ಮಿಕರ ಸಂಕಷ್ಟ ಪರಿಹಾರವಾಗದಿರುವಾಗಲೇ ಪ್ರಯಾಣದರ ಹೆಚ್ಚಳವಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಂಝಾನ್ ತಿಂಗಳಲ್ಲಿ, ವಿಮಾನಯಾನ ದಟ್ಟಣೆಯ ಲಾಭ ಪಡೆಯಲು ವಿಮಾನ ಕಂಪನಿಗಳು ಪ್ರತೀ ವರ್ಷ ದರವನ್ನು ಹೆಚ್ಚಿಸುತ್ತದೆ.ಮನಬಂದಂತೆ ದರ ಹೆಚ್ಚಿಸುವ ಏರ್ಲೈನ್ಸ್ ಕಂಪೆನಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ವಲಸಿಗರಲ್ಲಿ ಅಸಾಮಾಧಾನ ಉಂಟಾಗಿದೆ.

error: Content is protected !! Not allowed copy content from janadhvani.com